Thursday, December 5, 2024
Homeಅಂತಾರಾಷ್ಟ್ರೀಯ | Internationalಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್ ಸರ್ಕಾರ

ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್ ಸರ್ಕಾರ

Swiss Burqa Ban: What it means as new law takes effect from January 2025

ಬೆರ್ನ್,ನ.9- ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಜಾರಿಗೊಳಿಸಿದೆ.ಸ್ವಿಟ್ಜರ್ಲ್ಯಾಂಡ್ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಾರ್ಟಿ ಬುರ್ಖಾ ಬ್ಯಾನ್ ಮಾಡಲು ಸ್ವಿಸ್ ಸಂಸತ್ ಮೇಲನೆಯಲ್ಲಿ ಅಂಗೀಕಾರ ಪಡೆದಿತ್ತು. ಅಲ್ಲದೆ 2021 ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿಯೂ ಬಹು ಸಂಖ್ಯೆಯ ಜನರು ಬುರ್ಖಾ ನಿಷೇಧದ ಪರವಾಗಿ

ಓಟ್ ಹಾಕಿದ್ದರು. ಹೌದು ಬುರ್ಖಾ ಮತ್ತು ಮುಖಗವಸುಗಳನ್ನು ನಿಷೇಧಿಸಬೇಕೆ ಎಂದು ಅಲ್ಲಿನ ಜನರಲ್ಲಿ ಕೇಳಿದಾಗ 51 ಪ್ರತಿಶತದಷ್ಟು ಜನರು ಬುರ್ಖಾ ನಿಷೇಧಕ್ಕೆ ಬೆಂಬಲ ನೀಡಿದ್ದರು. ಇನ್ನೂ ಸ್ವಿಟ್ಜರ್ಲ್ಯಾಂಡ್ ಸರ್ಕಾರದ ಈ ನಿರ್ಧಾರಕ್ಕೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಎಲ್ಲದರ ನಡುವೆಯೂ ಇದೀಗ ಇಲ್ಲಿನ ಸರ್ಕಾರ ಅಧೀಕೃತವಾಗಿ ಬುರ್ಖಾ ನಿಷೇಧದ ಕಾನೂನನ್ನು ಜಾರಿಗೊಳಿಸಿದೆ.

ಜನವರಿಯಿಂದ ಈ ಕಠಿಣ ನಿಯಮ ಜಾರಿಯಾಗಲಿದ್ದು, ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್ ಫ್ರಾಂಕ್ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರ ಜಾರಿಗೊಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

ನಿಷೇಧವನ್ನು ಸಾರ್ವತ್ರಿಕವಾಗಿ ಅನ್ವಯಿಸುವುದಿಲ್ಲ ಎಂದು ಸ್ವಿಸ್ ಸರ್ಕಾರ ಸ್ಪಷ್ಟಪಡಿಸಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ ಕೆಲವು ಸ್ಥಳಗಳು ಮತ್ತು ಸನ್ನಿವೇಶಗಳಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ವಿಮಾನ, ರಾಜತಾಂತ್ರಿಕ ಸ್ಥಳಗಳು, ಪವಿತ್ರ ಸ್ಥಳಗಳು, ಪೂಜಾ ಆವರಣಗಳಲ್ಲಿ ಬುರ್ಖಾಗಳನ್ನು ಧರಿಸಬಹುದು, ವೈದ್ಯಕೀಯ ಕಾರಣಗಳು ಹಾಗೂ ವಿಪರೀತ ಚಳಿಯ ಸಂದರ್ಭದಲ್ಲಿ ಮುಖ ಮುಚ್ಚುವಂತೆ ಹೊದಿಕೆಗಳನ್ನು ಧರಿಸಬಹುದು.

ಹೆಚ್ಚುವರಿಯಾಗಿ ಜಾಹೀರಾತು ಮನರಂಜನಾ ಉದ್ದೇಶಗಳಿಗಾಗಿ ಬುರ್ಖಾ ಮತ್ತು ಮುಖ ಗವಸುಗಳನ್ನು ಧರಿಸಬಹುದು. ಜೊತೆಗೆ ಸೂಕ್ತ ಪ್ರಾಧಿಕಾರವು ಪೂರ್ವ ಅನುಮತಿಯನ್ನು ನೀಡಿದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಸಭೆಗಳು ನಡೆಯುವಲ್ಲಿ ವೈಯಕ್ತಿಯ ರಕ್ಷಣೆಗಾಗಿ ಬುರ್ಖಾ ಅಥವಾ ಮುಖ ಗವಸುಗಳನ್ನು ಧರಿಸಬಹುದು.

ಇಸ್ಲಾಂ ಧರ್ಮದ ಆಚರಣೆ ಮತ್ತು ಸಂಪ್ರದಾಯದ ಭಾಗವಾಗಿ ಹೆಚ್ಚಿನ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಾರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿಯೇ ಓಡಾಡುತ್ತಾರೆ. ಆದರೆ ಫ್ರಾ ನ್ಸ್ , ಚೀನಾ, ಡೆನಾರ್ಕ್, ಬಲ್ಗೇರಿಯಾ, ಆಸ್ಟ್ರೀಯಾ, ಬೆಲ್ಜಿಯಮ್ ಇತ್ಯಾದಿ ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವುದಕ್ಕೆ ನಿಷೇಧವನ್ನು ಹೇರಿವೆ. ಇದೀಗ ಈ ಪಟ್ಟಿಗೆ ಸ್ವಿಟ್ಜರ್ಲ್ಯಾಂಡ್ ದೇಶವೂ ಕೂಡಾ ಸೇರ್ಪಡೆಯಾಗಿದೆ.

RELATED ARTICLES

Latest News