Friday, November 22, 2024
Homeರಾಜ್ಯಪ್ರಗತಿಗೆ ಪೂರಕ ಆಯವ್ಯಯ ಮಂಡನೆ : ಶರವಣ

ಪ್ರಗತಿಗೆ ಪೂರಕ ಆಯವ್ಯಯ ಮಂಡನೆ : ಶರವಣ

ಬೆಂಗಳೂರು, ಫೆ.1-ಆರ್ಥಿಕ ಸ್ಥಿರತೆ, ಸಮಗ್ರ ಅಭಿವೃದ್ದಿ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವ ಹಾಗೂ ಬಡವರು, ರೈತರು, ಮಾಧ್ಯಮ ವರ್ಗಕ್ಕೆ ಸ್ಪಂದಿಸುವ 2024-2 5ನೆ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಪ್ರಗತಿಗೆ ಪೂರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈಗಾರಿಕೆ, ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ರೈತರ ಪ್ರಗತಿ- ಹೀಗೆ ಸರ್ವತೋಮುಖಿ ಮತ್ತು ಸರ್ವಸ್ಪರ್ಶಿಯಾಗಿರುವ ಈ ಬಜೆಟ್ ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ ಸುಸ್ಥಿರವಾಗಿದೆ ಎಂದಿದ್ದಾರೆ.

ವಿಶ್ವದ ಬಲಿಷ್ಠ ರಾಷ್ಟ್ರ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಆಗಿದ್ದು, ಆ ದಿಕ್ಕಿನಲ್ಲಿ ಇದೊಂದು ಚಾರಿತ್ರಿಕ ಬಜೆಟ್ ಆಗಿದೆ. ಬರುವ ಎರಡು ದಶಕಗಳಲ್ಲಿ ಭಾರತವನ್ನು ಜಗತ್ತಿನ ಶಕ್ತಿಯಾಗಿ ರೂಪಿಸುವಲ್ಲಿ ಈ ಬಜೆಟ್ ಮಾರ್ಗ ಸೂಚಿ ಆಗಿದೆ ಎಂದು ಶ್ಲಾಘಿಸಿದ್ದಾರೆ.

ಮಾಲ್ಡೀವ್ಸ್ ಗೆ ತಿರುಗೇಟು : ಬಜೆಟ್‍ನಲ್ಲಿ ಲಕ್ಷದ್ವೀಪ ಅಭಿವೃದ್ಧಿ ಘೋಷಣೆ

ಮದ್ಯಮ ವರ್ಗಗಳಿಗೆ ಏಳು ಲಕ್ಷ ರೂ. ವರೆಗಿನ ಶೂನ್ಯ ತೆರಿಗೆ, ಕಾಪೆರ್ರೇಟ್ ತೆರಿಗೆ ಶೇ. 22ರವರೆಗೆ ಇಳಿಕೆ, ಯುವ ಉದ್ಯೋಗಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿ ನಿಧಿ ಘೋಷಿಸಿರುವುದು ಸುಧಾರಣೆಯ ನಿಟ್ಟಿನಲ್ಲಿ ಅಭೂತ ಪೂರ್ವ ಯೋಜನೆಗಳಾಗಿವೆ. ರೈತ ಪರ ಕಿಸಾನ್ ಸಮ್ಮಾನ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅಯುಷ್ಮನ್, ಪ್ರಧಾನಿ ಅವಾಸ್ ಯೋಜನೆಯಲ್ಲಿ ಎರಡು ಕೋಟಿ ಮನೆಗಳ ನಿರ್ಮಾಣ ಮಾಡುವುದನ್ನು ಪ್ರಕಟಿಸಿರುವುದು ದೇಶದ ಹಿರಿಮೆಯ ಘೋಷಣೆಗಳಾಗಿವೆ ಎಂದಿದ್ದಾರೆ.

ಕೆಲವು ವಿವಾದಿತ ತೆರಿಗೆ ಸ್ಲಾಬ್‍ಗಳನ್ನು ರದ್ದು ಮಾಡಿರುವುದು ಸುಧಾರಣಾ ಕ್ರಮಗಳಾಗಿವೆ. ವಿವಿಧ ರೀತಿಯ ಕಾರಿಡಾರ್ ಸ್ಥಾಪನೆ, ರೈಲು ಭೋಗಿಗಳ ಉನ್ನತೀಕರಣ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಘೋಷಣೆಗಳು ಮೋದಿ ಸಾರಥ್ಯದಲ್ಲಿ ಹೊಸ ಭಾರತ ಕಟ್ಟುವ ನಿಟ್ಟಿನಲ್ಲಿ ಘೋಷ ವಾಕ್ಯಗಳಾಗಲಿವೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News