Thursday, November 21, 2024
Homeಕ್ರೀಡಾ ಸುದ್ದಿ | Sportsವಿಶ್ವಕಪ್‌ ವಿಜೇತ ಕೋಚ್‌, ಕನ್ನಡಿಗ ದ್ರಾವಿಡ್‌ಗೆ 5 ಕೋಟಿ ಬಹುಮಾನ

ವಿಶ್ವಕಪ್‌ ವಿಜೇತ ಕೋಚ್‌, ಕನ್ನಡಿಗ ದ್ರಾವಿಡ್‌ಗೆ 5 ಕೋಟಿ ಬಹುಮಾನ

ಬೆಂಗಳೂರು, ಜು. 8- ವೆಸ್ಟ್‌ ಇಂಡೀಸ್‌‍ನ ಬಾರ್ಬಡೋಸ್‌‍ನಲ್ಲಿ ನಡೆದ 2024ರ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಗೆಲುವು ಸಾಧಿಸಿದ ಟೀಮ್‌ ಇಂಡಿಯಾದ ಆಟಗಾರರಿಗೆ ಬಹುಮಾನದ ಸುರಿ ಮಳೆಯೇ ಹರಿದು ಬರುತ್ತಿದೆ.

17 ವರ್ಷಗಳ ನಂತರ ಚುಟುಕು ವಿಶ್ವಕಪ್‌ ಗೆದ್ದು ಅವಿಸರಣೀಯಗೊಳಿಸಿದ ಕ್ಷಣದ ಬೆನ್ನಲ್ಲೇ ಬಿಸಿಸಿಐ ಆಟಗಾರರು ಹಾಗೂ ಸಿಬ್ಬಂದಿಗಳಿಗೆ 125 ಕೋಟಿ ಬಹುಮಾನ ಘೋಷಿ ಸಿದ್ದು, ಮುಂಬೈನಲ್ಲಿ ನಾಳೆ ನಡೆಯಲಿರುವ ಸಮಾರಂಭದಲ್ಲಿ ಈ ಬಹುಮಾನ ಮೊತ್ತದ ಚೆಕ್‌ಗಳನ್ನು ವಿತರಿಸಲಾಗುತ್ತದೆ.

ಯಾರಿಗೆ ಎಷ್ಟು ಮೊತ್ತ.?
2013ರ ನಂತರ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿರುವ ತಂಡದ ಹೆಡ್‌ ಕೋಚ್‌ ಹಾಗೂ ಕನ್ನಡಿಗ ರಾಹುಲ್‌ ದ್ರಾವಿಡ್‌ಗೆ ವ 5 ಕೋಟಿ ರೂಪಾಯಿ ಬಹುಮಾನ ಚೆಕ್‌ ಅನ್ನು ಬಿಸಿಸಿಐ ವಿತರಿಸಿದರೆ, ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ವಹಿಸಿದ್ದ ಆಟಗಾರರು ಹಾಗೂ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದು ಒಂದೇ ಒಂದು ಪಂದ್ಯವನ್ನು ಆಡದ ಸಂಜು ಸ್ಯಾಮ್ಸನ್‌ , ಯುಜ್ವೇಂದ್ರ ಚಹಲ್‌ ಹಾಗೂ ಯಶಸ್ವಿ ಜೈಸ್ವಾಲ್‌ಗೂ 5 ಕೋಟಿ ಮೌಲ್ಯದ ಚೆಕ್‌ ಸಿಗಲಿದೆ.

ರಿಂಕು ಸಿಂಗ್‌ಗೆ 1 ಕೋಟಿ:
ವೆಸ್ಟ್‌ ಇಂಡೀಸ್‌‍ ಹಾಗೂ ಅಮೇರಿಕಾದ ಜಂಟಿಯಾಗಿ ಆಯೋಜಿಸಿದ್ದ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್‌, ಶುಭಮನ್‌ ಗಿಲ್‌, ಆವೇಶ್‌ ಖಾನ್‌ ಹಾಗೂ ಖಲೀಲ್‌ ಅಹದ್‌ಗೆ ತಲಾ 1 ಕೋಟಿ ಮೊತ್ತದ ಚೆಕ್‌ ಅನ್ನು ಸಮಾರಂಭದಲ್ಲಿ ವಿತರಿಸಲಾಗುವುದು.

ಕೋಚಿಂಗ್‌ ಸಿಬ್ಬಂದಿಗಳಿಗೂ ಪುರಸ್ಕಾರ:
ಭಾರತ ತಂಡದ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ಗೆ 5 ಕೋಟಿ ರೂ. ಬಹುಮಾನದ ಚೆಕ್‌ ದೊರೆತರೆ, ಫೀಲ್ಡಿಂಗ್‌ ಕೋಚ್‌, ಕನ್ನಡಿಗ ಟಿ.ದಿಲೀಪ್‌, ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋರ್‌ ಹಾಗೂ ಬೌಲಿಂಗ್‌ ಕೋಚ್‌ ಪ್ರಹಸ್‌‍ ಮಹಂಬ್ರೆಗೆ ತಲಾ 2.5 ಕೋಟಿ ದೊರೆತರೆ, ಉಳಿದ ಸಿಬ್ಬಂದಿಗಳಿಗೆ ತಲಾ 2 ಕೋಟಿ, ಆಯ್ಕೆ ಮಂಡಳಿಯ ಅಧ್ಯಕ್ಷ ಅಜಿತ್‌ ಅಗರ್ಕರ್‌ ಸೇರಿದಂತೆ 5 ಮಂದಿಗೆ ತಲಾ ಒಂದು ಕೋಟಿ ಮೌಲ್ಯದ ಚೆಕ್‌ ಅನ್ನು ವಿತರಣೆ ಮಾಡಲಾಗುವುದು.

ಬಹುಮಾನದ ಸುರಿಮಳೆ:
ದಕ್ಷಿಣ ಆಫ್ರಿಕಾವನ್ನು ಮಣಿಸಿ 2024ರ ಟ್ವೆಂಟಿ-20 ಚಾಂಪಿಯನ್‌ ಪಟ್ಟ ಅಲಂಕರಿಸಿದ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಐಸಿಸಿ ನಿಗಧಿತ ಪಡಿಸಿದ್ದ ವ 20 ಕೋಟಿ ರೂ. ಮೌಲ್ಯದ ಬಹುಮಾನದ ಮೊತ್ತ ಹಾಗೂ ಸುಂದರವಾದ ಟ್ರೋಫಿ ದೊರೆತಿದ್ದರೆ, ಮಹಾರಾಷ್ಟ್ರ ಸರ್ಕಾರದ ವಿಶ್ವಕಪ್‌ ತಂಡದಲ್ಲಿದ್ದ ತಮ ರಾಜ್ಯದ ನಾಯಕ ರೋಹಿತ್‌ ಶರ್ಮಾ, ಶಿವಂದುಬೇ, ಸೂರ್ಯಕುಮಾರ್‌ ಯಾದವ್‌ ಹಾಗೂ ಯಶಸ್ವಿ ಜೈಸ್ವಾಲ್‌ಗೆ 11 ಕೋಟಿ ಮೌಲ್ಯದ ಬಹುಮಾನವನ್ನು ವಿತರಿಸಲಾಗಿದೆ.

RELATED ARTICLES

Latest News