Tuesday, July 16, 2024
Homeಬೆಂಗಳೂರುವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾದ ಕಾಮುಕನಿಗಾಗಿ ಶೋಧ

ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾದ ಕಾಮುಕನಿಗಾಗಿ ಶೋಧ

ಬೆಂಗಳೂರು,ಜು.8- ಉದ್ಯಾನನಗರಿ ಬೆಂಗಳೂರು ಇತ್ತೀಚೆಗೆ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಪದೇಪದೇ ಕಂಡು ಬರುತ್ತಿದೆ. ಮಹಿಳೆಯರು ನಿರ್ಭೀತಿಯಿಂದ ಓಡಾಡದಂತಹ ವಾತಾವರಣ ನಿರ್ಮಾಣವಾಗುತ್ತಿದೆ.

ನಗರದ ಸಾಂಸ್ಕೃತಿಕ ಹಾಗೂ ಜನನಿಬಿಡ ಪ್ರದೇಶವಾದ ವಿವಿ ಪುರಂನಲ್ಲಿ ಕಾಮುಕನೊಬ್ಬನ ದುರ್ವತನೆ ಹೆಚ್ಚಾಗಿದೆ. ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಕಾಮುಕನೊಬ್ಬ ವಿವಿಪುರಂ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿ ಕಿರುಕುಳ ನೀಡುತ್ತಿದ್ದು, ಇದರಿಂದ ಈ ಭಾಗದಲ್ಲಿ ವಿದ್ಯಾರ್ಥಿನಿಯರು ಓಡಾಡುವುದಕ್ಕೆ ಭಯಭೀತರಾಗಿದ್ದಾರೆ.

ಅದರಲ್ಲೂ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದು, ಗುರುತು ಸಿಗದಂತೆ ದುಷ್ಕರ್ಮಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು, ಯುವತಿಯರ ಬಳಿ ಬೈಕ್‌ ನಿಲ್ಲಿಸಿ ತನ್ನ ಪ್ಯಾಂಟ್‌ ಬಿಚ್ಚಿ ಅಸಭ್ಯ ರೀತಿಯಲ್ಲಿ ವರ್ತಿಸಿ ನಾಪತ್ತೆ ಆಗುತ್ತಿದ್ದಾನೆ.

ಈ ದುಷ್ಟ ಕಾಮುಕನ ಅಟ್ಟಹಾಸದ ಕೃತ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದರಿಂದ ನೊಂದ ವಿದ್ಯಾರ್ಥಿನಿಯರು ವಿವಿಪುರಂ ಠಾಣೆಗೆ ದೂರು ನೀಡಿದ್ದು, ಪುಂಡನ್ನು ಪತ್ತೆ ಮಾಡಿ ಬಂಧಿಸಿ ವಿದ್ಯಾರ್ಥಿನಿಯರು ನಿರ್ಭೀತಿಯಿಂದ ಓಡಾಡುವಂತಹ ವಾತಾವರಣ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

RELATED ARTICLES

Latest News