Tuesday, July 23, 2024
Homeಬೆಂಗಳೂರುಹೈಬೀಮ್ ಎಲ್‌ಇಡಿ ಲೈಟ್ ಅಳವಡಿಸಿದ ವಾಹನಗಳಿಂದ 77,500 ರೂ. ದಂಡ ವಸೂಲಿ

ಹೈಬೀಮ್ ಎಲ್‌ಇಡಿ ಲೈಟ್ ಅಳವಡಿಸಿದ ವಾಹನಗಳಿಂದ 77,500 ರೂ. ದಂಡ ವಸೂಲಿ

ಬೆಂಗಳೂರು,ಜು.8- ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣುಕುಕ್ಕುವಂತಹ ಎಲ್ಇಡಿ ದೀಪಗಳನ್ನು ವಾಹನಗಳಿಗೆ ಅಳವಡಿಸಿರುವ ವಾಹನ ಚಾಲಕರುಗಳ ವಿರುದ್ಧ ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 155 ಪ್ರಕರಣಗಳನ್ನು ದಾಖಲಿಸಿಕೊಂಡು 77,500 ರೂ. ದಂಡ ಸಂಗ್ರಸಿದ್ದಾರೆ.

ಸುಮಾರು 360 ವಾಹನಗಳನ್ನು ತಪಾಸಣೆ ಮಾಡಿ 150ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು 77,500 ರೂ. ದಂಡ ಸಂಗ್ರಹಿಸಿದ್ದಾರೆ.ಸಂಚಾರ ನಿಯಮಗಳನ್ನು ಕಡ್ಡಾಯ ವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.

ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಪೂರ್ವ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್. ಜೈನ್ ಅವರು ತಿಳಿಸಿದ್ದಾರೆ.

RELATED ARTICLES

Latest News