ನ್ಯೂಯಾರ್ಕ್, ಜೂ.12- ಇಲ್ಲಿನ ನಾಸೌವ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಟೀಮ್ ಇಂಡಿಯಾ ಹಾಗೂ ಅಮೇರಿಕ ತಂಡಗಳ ನಡುವೆ ಭಾವನಾತಕ ಘರ್ಷಣೆ ಉಂಟಾಗಲಿದೆ ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮೀಪತಿ ಬಾಲಾಜಿ ಹೇಳಿದ್ದಾರೆ.
ಅತಿಥೇಯ ತಂಡವು ಆರಂಭಿಕ ಪಂದ್ಯಗಳಲ್ಲಿ ಗಳಿಸಿರುವ 195 ರನ್‌ಗಳ ಗೆಲುವು ಪ್ರಸಕ್ತ ಚುಟುಕು ವಿಶ್ವಕಪ್ ಟೂರ್ನಿಯ ಗರಿಷ್ಠ ಸ್ಕೋರ್ ಆಗಿದ್ದು, ನಂತರ ತಮ ದ್ವಿತೀಯ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿದೆ.
ಮತ್ತೊಂದೆಡೆ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡವು ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಜಯಿಸಿದ್ದು, ಅಮೇರಿಕ ತಂಡವನ್ನು ಮಣಿಸುವ ಮೂಲಕ ಸೂಪರ್-8 ಹಂತಕ್ಕೆ ತಲುಪುವ ಹೊಸ್ತಿಲಿನಲ್ಲಿ ನಿಂತಿದೆ.
ಅಮೇರಿಕಾದಲ್ಲಿ ಭಾರತ ಮೂಲದ ಲಕ್ಷಾಂತರ ಮಂದಿ ನೆಲೆಸಿದ್ದು, ಇಂದು ನಡೆಯುವ ಪಂದ್ಯದಲ್ಲಿ ತಮ ಮಾತೃ ತಂಡವನ್ನು ಬೆಂಬಲಿಸಬೇಕೋ ಅಥವಾ ತಮ ದೇಶದ ತಂಡದತ್ತ ಒಲವು ತೋರಿಸಬೇಕೋ ಎಂಬ ಭಾವನಾತಕ ಸಂಘರ್ಷಕ್ಕೆ ಒಳಗಾಗಿದ್ದಾರೆ ಎಂದು ಆರ್‌ಸಿಬಿಯ ಮಾಜಿ ಆಟಗಾರ ಲಕ್ಷ್ಮೀಪತಿ ಬಾಲಾಜಿ ಹೇಳಿದ್ದಾರೆ.
“ಅಮೇರಿಕಾಗೆ, ಇದು ಅತಿದೊಡ್ಡ ಪಂದ್ಯವಾಗಲಿದೆ ಏಕೆಂದರೆ 1.4 ಶತಕೋಟಿ ಜನರು ಈ ಆಟವನ್ನು ವೀಕ್ಷಿಸುತ್ತಾರೆ. ಆದ್ದರಿಂದ ಅವರು ಮೈದಾನದಲ್ಲಿ ತೋರಿಸಲು ಬಯಸುವ ಬ್ರ್ಯಾಂಡ್ ಆಗಿದೆ. ಅವರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ, ನಿರ್ದಿಷ್ಟ ಆಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಾರೆ ‘ ಎಂದು ಬಾಲಾಜಿ ಸ್ಟಾರ್ ಸ್ಪೋರ್ಟ್‌್ಸಗೆ ತಿಳಿಸಿದ್ದಾರೆ.
` ಅಮೇರಿಕಾದಲ್ಲಿ ನೆಲೆಸುವವರ ಮನಸ್ಥಿತಿಯ ಆಧಾರದ ಮೇಲೆ ಹೇಳುವುದಾದರೆ ಇಂದಿನ ಪಂದ್ಯವು ಮಿನಿ ಇಂಡಿಯಾ ವರ್ಸಸ್ ಇಂಡಿಯಾ ನಡುವಿನ ಘರ್ಷಣೆಯನ್ನು ನಿರೀಕ್ಷಿಸಬಹುದು. ನಾನು ಒಂದಿಬ್ಬರು ಅಮೇರಿಕಾ ತಂಡದ ಆಟಗಾರರನ್ನು ಭೇಟಿ ಮಾಡಿದಾಗ ಅವರೆಲ್ಲರೂ ಟೀಮ್ ಇಂಡಿಯಾ ಬಹಳಷ್ಟು ಕ್ರಿಕೆಟಿಗರನ್ನು ತಮ ಸ್ಫೂರ್ತಿಯಾಗಿಸಿಕೊಂಡಿದ್ದಾರೆ.
ಆ ತಂಡದಲ್ಲಿರುವ ಸಾಕಷ್ಟು ಮಂದಿಯು ಅಂಡರ್ 19 ವಯೋಮಾನದಲ್ಲಿ ಭಾರತ ತಂಡದ ಪರ ಆಡಿದ್ದು, ಈಗ ಅಮೇರಿಕಾದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ನಿಜಕ್ಕೂ ಭಾವನಾತಕವಾಗಿದೆ’ ಎಂದು ಲಕ್ಷ್ಮೀಪತಿ ಬಾಲಾಜಿ ಹೇಳಿದ್ದಾರೆ.