Thursday, December 5, 2024
Homeಕ್ರೀಡಾ ಸುದ್ದಿ | Sportsವಿಶ್ವಕಪ್‌ ರೇಸ್‌ನಿಂದ ಇಂಗ್ಲೆಂಡ್‌ ಔಟ್‌..?

ವಿಶ್ವಕಪ್‌ ರೇಸ್‌ನಿಂದ ಇಂಗ್ಲೆಂಡ್‌ ಔಟ್‌..?

ಅಂಟಿಗುವಾ, ಜೂ.12- ನಮೀಬಿಯಾ ವಿರುದ್ಧ ಆಸ್ಟ್ರೇಲಿಯಾ ಭಾರೀ ಅಂತರದ ಗೆಲುವಿನಿಂದ ಸೂಪರ್‌- 8 ಹಂತಕ್ಕೆ ಅರ್ಹತೆ ಪಡೆದಿದ್ದರೆ, ಈ ಗೆಲುವು ಇಂಗ್ಲೆಂಡ್‌ನ ಮುಂದಿನ ಹಂತವನ್ನು ಕಠಿಣಗೊಳಿಸಿದೆ.

2022ರ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಜೋಸ್‌‍ ಬಟ್ಲರ್‌ ಬಳಗ ಪ್ರಸಕ್ತ ಚುಟುಕು ವಿಶ್ವಕಪ್‌ ಸರಣಿಯ ಆರಂಭಿಕ ಪಂದ್ಯದಲ್ಲೇ ಸ್ಕಾಟ್ಲೆಂಡ್‌ ವಿರುದ್ಧದ ಪಂದ್ಯವು ಮಳೆಯಿಂದ ಆಹುತಿಯಾಗಿ ಆಂಗ್ಲರ ಪಡೆಗೆ ನಿರಾಸೆ ಮೂಡಿಸಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಜೋಸ್‌‍ ಬಟ್ಲರ್‌ ಬಳಗದ ಸೂಪರ್‌- 8 ಹಂತವು ಮತ್ತಷ್ಟು ಕಠಿಣವಾಯಿತು.

ಹಾಲಿ ಚಾಂಪಿಯನ್‌ ತಮ ಮುಂದಿನ ಪಂದ್ಯಗಳನ್ನು ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ಒಮನ್‌ ಹಾಗೂ ನಮೀಬಿಯಾ ವಿರುದ್ಧ ಆಡುತ್ತಿದ್ದು ಈ ಪಂದ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸುವ ಮೂಲಕ 5 ಅಂಕಗಳನ್ನು ಕಲೆಹಾಕಿದರೆ ಸೂಪರ್‌- 8 ಹಂತ ತಲುಪುವ ಅವಕಾಶ ಹೊಂದುತ್ತದೆ.

ಒಂದು ವೇಳೆ ಸ್ಕಾಟ್ಲೆಂಡ್‌ ತಮ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಆಗ ಅದರ ಅಂಕ 7ಕ್ಕೇರುತ್ತದೆ. ಆದ್ದರಿಂದ ಆಸ್ಟ್ರೇಲಿಯಾ ತಂಡವು ಭಾರೀ ಅಂತರದಿಂದ ಗೆಲುವು ಸಾಧಿಸಬೇಕಾಗುತ್ತದೆ. ಒಂದು ವೇಳೆ ಕಡಿಮೆ ಅಂತರದ ಸ್ಕಾಟ್ಲೆಂಡ್‌ ಸೋಲು ಕಂಡರೆ ಆಗ ಕ್ರಿಕೆಟ್‌ ಜನಕರ ಸೂಪರ್‌- 8 ಹಂತದ ಕನಸು ನುಚ್ಚು ನೂರಾಗುತ್ತದೆ. ಜೋಸ್‌‍ ಬಟ್ಲರ್‌ ಸಾರಥ್ಯದ ಇಂಗ್ಲೆಂಡ್‌ ತನ್ನ ಮುಂದಿನ ಪಂದ್ಯವನ್ನು ಜೂನ್‌ 14 ರಂದು ಒಮನ್‌ ವಿರುದ್ಧ ಆಡಲಿದೆ.

RELATED ARTICLES

Latest News