Sunday, December 1, 2024
Homeರಾಷ್ಟ್ರೀಯ | National9 ವರ್ಷದ ಮಗನ ಬಾಯಿಗೆ ಕಾಗದದ ಚೆಂಡನ್ನು ತುರುಕಿ ಕೊಂದ ತಂದೆ

9 ವರ್ಷದ ಮಗನ ಬಾಯಿಗೆ ಕಾಗದದ ಚೆಂಡನ್ನು ತುರುಕಿ ಕೊಂದ ತಂದೆ

ಥಾಣೆ, ಜೂ 12- ತನ್ನ ಒಂಬತ್ತು ವರ್ಷದ ಮಗನ ಬಾಯಿಗೆ ಕಾಗದದ ಚೆಂಡನ್ನು ತುರುಕಿ ಉಸಿರುಗಟ್ಟಿಸಿ ತಂದೆಯೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸಹಾಪುರ ತಾಲೂಕಿನ ಕಾಸರ ಪ್ರದೇಶದ ವಾಶಾಲಾದಲ್ಲಿ ನಡೆದಿದೆ.ಈ ಸಂಬಂಧ ತಂದೆಯನ್ನುಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಮದ್ಯದ ಅಮಲಿನಲ್ಲಿದ್ದ ಈ ಕೃತ್ಯ ನಡೆಸಿದ್ದಾನೆ ,ಅಪರಾಧದ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ವ್ಯಕ್ತಿಯು ತನ್ನ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಬಾಲಕ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ಕಳೆದ ಸೋಮವಾರ ತಾಯಿ ಮನೆಯಿಂದ ಬಾಲಕ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.ಆದರೆ ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಅಪ್ರಾಪ್ತ ಬಾಲಕ ತನ್ನ ತಂದೆಯ ಮನೆಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದರು ಮತ್ತು ಅವರು ಹುಡುಗನ ಬಾಯಿಯಲ್ಲಿ ಕಾಗದದ ಬಾಲ್‌ ತುಂಬಿ ಮತ್ತು ಅವನ ಮೂಗಿನಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

ತನ್ನ ಪತ್ನಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ ನಂತರ ಆರೋಪಿ ಅತಿಯಾದ ಮದ್ಯಪಾನ ಸೇವಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಮಂಗಳವಾರದ ಮಧ್ಯರಾತ್ರಿ ಮದ್ಯ ಸೇವಿಸಿ, ಹರಿದ ನೋಟ್‌ಬುಕ್‌ ಪೇಪರ್‌ಗಳಿಂದ ತಯಾರಿಸಿದ ಚೆಂಡನ್ನು ಬಾಲಕನ ಬಾಯಿಗೆ ತುರುಕಿಸಿದ ಕಾರಣ ಆತನ ಅಸುನೀಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಮೃತರ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಕಳೆದ ರಾತ್ರಿ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News