ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

ಬೆಂಗಳೂರು, ಅ.29- ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಆಗಲಿ ಇಂದಿಗೆ ಒಂದು ವರ್ಷ ಕಳೆದೇ ಹೋಯ್ತು. ಆದರೆ ಅವರ ನೆನಪುಗಳು ಪ್ರತಿಯೊಬ್ಬರ ಮನಗಳಲ್ಲಿ ಅಚ್ಚಳಿಯದೆ ಹಾಗೆ ಉಳಿದುಕೊಂಡಿವೆ. ಕಳೆದ ವರ್ಷ ಇದೇ ತಿಂಗಳು ಇದೇ ದಿನ ಅಚಾನಕ್ಕಾಗಿ ಯಾರಿಗೂ ಹೇಳದೆ ಬಾರದ ಲೋಕಕ್ಕೆ ಪಯಣ ಬೆಳೆಸಿದ ರಾಜಕುಮಾರನಿಗೆ ಮಿಡಿದ ಹೃದಯಗಳು ಅಗಣಿತ. ತಮ್ಮ ಮನೆಯಲ್ಲಿ ಒಬ್ಬ ಸದಸ್ಯರನ್ನು ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಶೋಕ ವ್ಯಕ್ತಪಡಿಸಿದರು. ಯಾರೇ ಒಬ್ಬ ಗಣ್ಯ ವ್ಯಕ್ತಿ ಇಹಲೋಕ ತ್ಯಜಿಸಿದಾಗ ಒಂದು ಅಥವಾ ಎರಡು […]

ಪುಣ್ಯತಿಥಿ: ವಾಜಪೇಯಿ ಸ್ಮಾರಕಕ್ಕೆ ಗಣ್ಯರ ನಮನ

ನವದೆಹಲಿ,ಆ.16- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಖರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ದೆಹಲಿಯಲ್ಲಿರುವ ಎ.ಬಿ.ವಾಜಪೇಯಿ ಅವರ ಸದೈವ್ ಅಟಲ್ ಸ್ಮಾರಕಕ್ಕೆ ತೆರಳಿದ ರಾಷ್ಟ್ರ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿ ಮೋದಿಯಲ್ಲದೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಂ […]

ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ತೊಲಗಿಸುವ ಚಳುವಳಿ ಅಗತ್ಯ : ಮೋದಿ

ನವದೆಹಲಿ,ಆ.9- ಕ್ವಿಟ್ ಇಂಡಿಯಾ ಚಳುವಳಿ ಸಂಸ್ಮರಣಾ ದಿನವಾದ ಇಂದು ಪ್ರಧಾನಿ ನರೇಂದ್ರಮೋದಿ ದೃಶ್ಯ ಸಂಕಲನದ ಮೂಲಕ ಸ್ಪೂರ್ತಿದಾಯಕವಾದ ಮಾತುಗಳ ಸಂದೇಶವನ್ನು ಸಾರಿದ್ದಾರೆ. ಸ್ವಾತಂತ್ರ್ಯ ಪೂರ್ವ ಆಗಸ್ಟ್ ತಿಂಗಳಿನಲ್ಲಿ ಹಲವಾರು ಮಹತ್ವಪೂರ್ಣ ಘಟನೆಗಳು ಸಂಭವಿಸಿವೆ. 1942, ಆ.9ರಂದು ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ( ಭಾರತ ಬಿಟ್ಟು ತೊಲಗಿ) ಚಳುವಳಿಯನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ದೇಶವಾಸಿಗಳು ಯಾವುದೇ ಬೇಧಭಾವವಿಲ್ಲದೆ ತಮ್ಮನ್ನು ತೊಡಗಿಸಿಕೊಂಡರು. ಬಹಳಷ್ಟು ಮಂದಿ ಓದುವುದನ್ನು ಬಿಟ್ಟರು, ಸರ್ಕಾರಿ ಕೆಲಸ ತೊರೆದರು, ಮನೆ ಬಿಟ್ಟು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ […]

ಬಂಡಾಯದ ಪದ್ಯದಿಂದಲೇ ರವೀಂದ್ರನಾಥ್ ಠ್ಯಾಗೂರ್ ಅವರಿಗೆ ನಮನ ಸಲ್ಲಿಸಿದ ರಾಹುಲ್

ನವದೆಹಲಿ, ಆ.7- ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಪುಣ್ಯತಿಥಿಯ ನಮನಗಳನ್ನು ಕೂಡ ಬಂಡಾಯದ ಕಾವ್ಯಗಳ ಧಾಟಿಯಲ್ಲೇ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈವರೆಗೂ ಸೌಮ್ಯ ಸ್ವಭಾವದಂತಿದ್ದ ರಾಹುಲ್‍ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಮ್ಮ ತಾಯಿ ಸೋನಿಯಾ ಗಾಂಧಿ ವಿಚಾರಣೆ ನಡೆಸಿ, ಹೆರಾಲ್ಡ್ ಹೌಸ್ ಜಪ್ತಿ ಮಾಡಿ, ಕಾಂಗ್ರೆಸ್ ಕಚೇರಿಗೆ ದಿಗ್ಭಂದನ ಹಾಕಲು ಯತ್ನಿಸಿದ ಬಳಿಕ ಸಿಟ್ಟಿಗೆದ್ದಂತೆ ಕಾಣುತ್ತಿದೆ. ಏನು ಮಾಡುತ್ತೀರೋ ಮಾಡಿ ನಾನು ಹೆದರಲ್ಲ, ಜನ ಪರವಾಗಿ ಧ್ವನಿ […]

ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಜನೋತ್ಸವ ರದ್ದು ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು,ಜು.28- ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿ ಜನೋತ್ಸವ ಯಾತ್ರೆ ರದ್ದುಗೊಳಿಸಿರುವ ಸಿಎಂ ನಿರ್ಧಾರ ಈಗ ತೀವ್ರ ಅಚ್ಚರಿಗೆ ಕಾರಣವಾಗಿದ್ದು, ಹೈಕಮಾಂಡ್ ತುರ್ತು ಎಚ್ಚರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ ಬುಧವಾರ ರಾತ್ರಿಯವರೆಗೂ ಜನೋತ್ಸವ ಕಾರ್ಯಕ್ರಮ ರದ್ಧುಗೊಳಿಸುವ ಯಾವ ಉದ್ದೇಶವೂ ಸಿಎಂ ಬೊಮ್ಮಾಯಿ ಅವರಿಗೆ ಇರಲಿಲ್ಲ. ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಆರ್.ಟಿ. ನಗರದಲ್ಲಿ ನಡೆದ ಬಿಜೆಪಿ ನಾಯಕರಾದ ಸಿ.ಟಿ.ರವಿ, ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗವಹಿಸಿದ್ದ ಸಭೆಯಲ್ಲಿ ಸಾಧನಾ ಸಮಾವೇಶವನ್ನು ಶ್ರದ್ಧಾಂಜಲಿ […]