ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

ನವದೆಹಲಿ, ಫೆ.18- ಪಂಜಾಬ್ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಕಳ್ಳಸಾಗಣಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಬಿಎಸ್‍ಎಫ್ ಯೋಧರು, ಅಪಾರ ಪ್ರಮಾಣದ ಮಾದಕ ದ್ರವ್ಯಗಳು, ಚೀನಾ ಮತ್ತು ಟರ್ಕಿ ನಿರ್ಮಿತ ಪಿಸ್ತೂಲ್‍ಗಳು ಮತ್ತು 242 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ಮುಂಜಾನೆ 5.30 ರ ಸುಮಾರಿಗೆ ಗುರುದಾಸ್‍ಪುರ ಸೆಕ್ಟರ್‍ನ ಡಿಬಿಎನ್ ಮತ್ತು ಶಿಕಾರ್ ಗಡಿ ಪೋಸ್ಟ್‍ನ ಬಳಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಶಸ್ತ್ರಸಜ್ಜಿತ ಕಳ್ಳಸಾಗಾಣಿಕೆದಾರರ ಚಲನವಲನವನ್ನು ಯೋಧರು ಪತ್ತೆಹಚ್ಚಿದರು. ಯೋಧರ ಎಚ್ಚರಿಕೆ ಹೊರತಾಗಿ ನುಸುಳುಕೋರರು ಚಲಿಸಿದ್ದರಿಂದ ಗುಂಡು ಹಾರಿಸಲಾಯಿತು, ಉಗ್ರರ […]

ಪಂಜಾಬ್‍ನ ಗಡಿಯಲ್ಲಿ ಚೀನಾ ಮೇಡ್ ಶಸ್ತ್ರಾಸ್ತ್ರ, ಡ್ರಗ್ಸ್ ಎಸೆದ ಪಾಕ್ ಡ್ರೋನ್

ನವದೆಹಲಿ,ಫೆ.10- ಪಂಜಾಬ್ ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಚೀನಾ ಮೇಡ್ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಎಸೆದಿದೆ. ಪಂಜಾಬ್‍ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‍ನಿಂದ ಬಿದ್ದಿದೆ ಎನ್ನಲಾದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸಂಗ್ರಹವನ್ನು ಗಡಿ ಭದ್ರತಾ ಪಡೆ ವಶಪಡಿಸಿಕೊಂಡಿದೆ. ರಾಜ್ಯದ ಫಿರೋಜ್‍ಪುರ ಸೆಕ್ಟರ್‍ನ ಗಡಿ ಪೋಸ್ಟ್‍ನಲ್ಲಿರುವ ಎಂಡಬ್ಲ್ಯೂ ಉತ್ತರ ಪ್ರದೇಶದ ಭಾರತೀಯ ಭೂಪ್ರದೇಶದೊಳಗೆ ಬಂದ ಪಾಕ್ ಡ್ರೋನ್‍ನ ಮೇಲೆ ಭಾರತೀಯ ಸೈನಿಕರು ಗುಂಡು ಹಾರಿಸಿದರು. ಮನೆಗಳ್ಳನ ಬಂಧನ : 18 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ವಶ […]

ಬೆಂಗಳೂರಲ್ಲಿ ಶಸ್ತ್ರಾಸ್ತ್ರ ಮಾರಾಟ ಜಾಲ ಪತ್ತೆಹಚ್ಚಿದ ಸಿಸಿಬಿ

ಬೆಂಗಳೂರು, ಫೆ.7- ಪಿಸ್ತೂಲ್‍ಗಳನ್ನು ಸರಬರಾಜು ಮಾಡುತ್ತಿದ್ದ ಅಂತಾರಾಜ್ಯ ಪಿಸ್ತೂಲ್ ಡೀಲರ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 10 ನಾಡ ಪಿಸ್ತೂಲ್ ಹಾಗೂ 20 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ರೋಷನ್ ಡಯರಾಮ್ ಬನ್ಸೋದ್ ಬಂಧಿತ ಆರೋಪಿ. ಆರೋಪಿಯು ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯಲ್ಲಿ ಸಂಗ್ರಹಿಸಿಟ್ಟಿದ್ದ 6 ನಾಡ ಪಿಸ್ತೂಲ್‍ಗಳು, 8 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಒಟ್ಟಾರೆ ಈ ಕಾರ್ಯಾಚರಣೆಯಲ್ಲಿ 10 ನಾಡಪಿಸ್ತೂಲ್ ಹಾಗೂ 7.65 ಎಂಎಂ 20 ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಪಿಸ್ತೂಲ್‍ಗಳು ಸರಬರಾಜು […]

ಗಡಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ಶ್ರೀನಗರ,ಡಿ.2- ಜಮ್ಮುಕಾಶ್ಮೀರ ಭಾಗದ ಗಡಿಯಲ್ಲಿ ಸೇನೆ, ಪೊಲೀಸರು ಹಾಗೂ ಇತರ ರಕ್ಷಣಾ ದಳಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವಾಸ್ತವ ಗಡಿರೇಖೆಯಲ್ಲಿ ಶಸ್ತ್ರಾಸ್ತ್ರಗಳ ಸಾಗಾಣಿಕೆಯಾಗುತ್ತಿವೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಕಮಲ್‍ಕೋಟೆಯ ರಿವಾಂಡನಲ್ಹಾ ಪ್ರದೇಶದಲ್ಲಿ ಶೋಧ ನಡೆಸಿದಾಗ 2 ಎಕೆ47 ರೈಫಲ್ಸ್, 2 ಗುಂಡು ತುಂಬಿದ ಮ್ಯಾಗ್ಜಿನ್‍ಗಳು, 117 ಸುತ್ತು ಗುಂಡುಗಳು, 2 ಚೀನಾ ನಿರ್ಮಿತ ಪಿಸ್ತೂಲ್, 2 ಪಿಸ್ತೋಲ್ ಮ್ಯಾಗ್ಜಿನ್‍ಗಳು, BIG NEWS : ವಾಣಿಜ್ಯ ಇಲಾಖೆಯ 18 […]

ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಭಯೋತ್ಪಾದಕ ಎನ್‌ಕೌಂಟರ್‌ನಲ್ಲಿ ಫಿನಿಷ್

ಜಮ್ಮು, ಆ. 18 -ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತದ ಗಡಿಯೊಳಗೆ ಭಯೋತ್ಪಾದಕರಿಗೆ ಮದ್ದುಗುಂಡುಗಳ ರವಾನೆ ಮಾಡುತ್ತಿದ್ದ ಘಟನೆ ಜಮ್ಮುನಲ್ಲಿ ನಡೆದಿದ್ದು ಭದ್ರತಾ ಪಡೆಗಳು ಸ್ಪೋಟಕ ವಶಪಡಿಸಿಕೊಂಡು ನಂತರ ನಡೆದ ಎನ್ಕೌಂಟರ್‍ನಲ್ಲಿ ಭಯೋತ್ಪಾದಕನೊಬ್ಬನನ್ನು ಸದೆಬಡಿದಿದ್ದಾರೆ. ಜೈಲಿನಲ್ಲಿರುವ ಎಲ್​ಇಟಿ ಭಯೋತ್ಪಾದಕ ಬಾಯಿ ಬಟ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಭಧ್ರತಾ ಪಡೆಗಳು ಗಡಿ ತಲುಪಿ ಡ್ರೋನ್ ಹೊಡೆದುರುಳಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಕು ಪತ್ತೆಯಾದ ಸ್ಥಳದಲ್ಲಿ ಅದನ್ನು ತಗೆದುಕೊಂಡು ಹೊಗಲು ಬಂದಿದ್ದ ಭಯೋತ್ಪಾದಕ ಮೊಹಮ್ಮದ್ ಅಲಿ […]