ನೇಮಕ ಮಾಡದಿದ್ದರೆ ಆಕಾಶ ಕಳಚಿಬೀಳುತ್ತಿತ್ತೇ: ಸುಪ್ರೀಂ ಗರಂ

ನವದೆಹಲಿ,ನ.24- ಕೇಂದ್ರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಸರಿಸಿದ ಕ್ರಮಕ್ಕೆ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅಷ್ಟು ಆತುರವಾಗಿ ನೇಮಕ ಮಾಡಿದಿದ್ದರೆ ಆಕಾಶ ಕಳಚಿ ಬೀಳುತಿತ್ತೇ ಎಂದು ಪ್ರಶ್ನೆ ಮಾಡಿದೆ. ಆಯುಕ್ತರನ್ನು ನೇಮಕ ಮಾಡುವ ಸಂದರ್ಭದಲ್ಲಿ ಅನುಸರಿಸಿದ ನೀತಿ ನಿಯಮಗಳು ಬೆಳಕಿನ ವೇಗಕ್ಕಿಂತಲೂ ಶರವೇಗದಲ್ಲಿ ನಡೆದಿದೆ. ಇಷ್ಟು ಆತುರವಾಗಿ ದಾಖಲಾತಿಗಳನ್ನು ಪರಿಶೀಲಿಸಿ ನೇಮಕ ಮಾಡುವ ಧಾವಂತವಾದರೂ ಏನಿತ್ತು? ಸ್ವಲ್ಪ ವಿಳಂಬ ಮಾಡಿದ್ದರೆ ಆಕಾಶವೇನು ಕಳೆಚಿ ಬೀಳುತ್ತಿತ್ತೇ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಚುನಾವಣಾ ಆಯುಕ್ತ ಅರುಣ್ […]
ಚುನಾವಣಾ ಆಯುಕ್ತರಾಗಿ ಗೋಯಲ್ ನೇಮಕ

ನವದೆಹಲಿ,ನ.21- ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು ಇಂದು ಚುನಾವಣಾ ಆಯುಕ್ತರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 1985ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದ ಗೋಯಲ್ ಅವರು ಮೊನ್ನೆಯಷ್ಟೆ ಸ್ವಯಂ ನಿವೃತ್ತಿ ಹೊಂದಿದ್ದರು. ಅವರ ನಿವೃತ್ತಿ ಬೆನ್ನಲ್ಲೆ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಆದೇಶ ಹೊರಡಿಸಲಾಗಿತ್ತು. ಇಂದು ಬೆಳಿಗ್ಗೆ ಕಚೇರಿಗೆ ಆಗಮಿಸಿದ ಗೋಯಲ್ ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ […]