ಬಿಇಎಂಎಲ್‍ನ 971 ಎಕರೆಯಲ್ಲಿ ಟೌನ್‍ಶಿಪ್ ನಿರ್ಮಾಣ : ಸಿಎಂ

ಬೆಂಗಳೂರು,ಸೆ.16-ಕೋಲಾರ ಜಿಲ್ಲೆ, ಕೆಜಿಎಫ್ ತಾಲ್ಲೂಕಿನ ರಾಬಟ್ಸ್‍ಸನ್‍ಪೇಟೆ ಹೋಬಳಿಯಲ್ಲಿರುವ ಬಿಇಎಂಎಲ್‍ನ 971 ಎಕರೆ ಜಮೀನನ್ನು ಅಭಿವೃದ್ಧಿ ಪಡಿಸಿ ಸಮಗ್ರ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಬೆಂಗಳೂರು ಸುತ್ತಮುತ್ತ ಹೊಸದಾಗಿ ಜಮೀನು ಖರೀದಿಸಿ ಕೈಗಾರಿಕಾ ಪ್ರದೇಶ ನಿರ್ಮಿಸುವುದು ಅಷ್ಟು ಸುಲಭವಲ್ಲ. ಇದು ಸರ್ಕಾರಕ್ಕೂ ಹೊರೆ ಹಾಗೂ ಕೈಗಾರಿಕೆ ಪ್ರಾರಂಭಿಸುವ ಉದ್ದೆಮಿಗಳಿಗೂ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಕೆಐಎಡಿಬಿಯಲ್ಲಿರುವ ಜಮೀನುಗಳನ್ನು ಅಭಿವೃದ್ಧಿಪಡಿಸಿ ಟೌನ್‍ಶಿಪ್ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು. ಇದನ್ನೂ ಓದಿ […]