ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಪೋಟ, ಇಬ್ಬರ ಸಾವು, ಹಲವರಿಗೆ ಗಾಯ

ಕಂಟೈ,ಡಿ.3- ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬಹಿರಂಗ ರ‍್ಯಾಲಿ ನಡೆಯುವ ಸಮೀಪದಲ್ಲೇ ನಿನ್ನೆ ತಡ ರಾತ್ರಿ ಬಾಂಬ್ ಸ್ಪೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಪುರ್ಬಾಮೆದಿನಿಪುರ್ ಜಿಲ್ಲೆಯ ಭೂಪತಿನಗರದ ಮನೆಯೊಂದರಲ್ಲಿ ನಿನ್ನೆ ರಾತ್ರಿ 1.15ರ ಸುಮಾರಿಗೆ ಸ್ಪೋಟ ಸಂಭವಿಸಿದೆ. ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದಾಗ ಇಬ್ಬರ ಶವಗಳು ಪತ್ತೆಯಾಗಿವೆ. ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ನಿಖರವಾದ ಕಾರಣ ಈವರೆಗೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಶಕ್ತಿಶಾಲಿ ಸ್ಪೋಟದಿಂದ ಮಣ್ಣಿನ ಮನೆಯ ಧ್ವಂಸವಾಗಿದ್ದು, […]

ಕಾಂಗ್ರೆಸ್ ಶಾಸಕರಿಂದ ನಗದು ವಶ ಪ್ರಕರಣ : ಅಸ್ಸಾಂ ಉದ್ಯಮಿಗೆ ಸಮನ್ಸ್

ಗುವಾಹಟಿ, ಆ.8 – ಜಾರ್ಖಂಡ್ ಕಾಂಗ್ರೇಸ್ ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಅಸ್ಸಾಂ ಮೂಲದ ಉದ್ಯಮಿ ಅಶೋಕ್ ಕುಮಾರ್ ಧನುಕಾ ಅವರಿಗೆ ಸಮನ್ಸ ನೀಡಿದ್ದಾರೆ. ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಗುವಾಹಟಿಯಲ್ಲಿರುವ ಧನುಕಾ ಅವರ ನಿವಾಸದ ಗೇಟ್‍ಗೆ ನೋಟಿಸ್ ಅಂಟಿಸಿ ಕೋಲ್ಕತ್ತಾದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ. ದೂರವಾಣಿ ಮೂಲಕ ಪದೇ ಪದೇ ಪ್ರಯತ್ನಿಸಿದರೂ ಧನುಕಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಆದ ಕಾರಣ ನೋಟೀಸ್ ನೀಡಿ ವಿಚಾರಣೆಗೆ […]

BIG NEWS : ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅರೆಸ್ಟ್

ಕೋಲ್ಕತ್ತಾ,ಜು.23-ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ 20 ಕೋಟಿ ರೂ. ನಗದು ಪತ್ತೆಯಾದ ದಿನದ ಒಳಗಾಗಿ ಜಾರಿ ನಿರ್ದೇಶನಾಲಯ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತ ಮುಖರ್ಜಿ ಅವರನ್ನು ಬಂಧಿಸಿದೆ. ಶನಿವಾರ ಬೆಳಗ್ಗೆ ಜಾರಿನಿರ್ದೇಶನಾಲಯದ 8ಕ್ಕೂ ಹೆಚ್ಚು ಅಧಿಕಾರಿಗಳು ಸಚಿವ ಪಾರ್ಥ ಅವರನ್ನು ವಿಚಾರಣೆಗೊಳಪಡಿಸಿದರು. ಸತತ ವಿಚಾರಣೆ ಬಳಿಕ ತೃಪ್ತಿದಾಯಕ ಉತ್ತರಗಳು ದೊರೆಯದ ಕಾರಣ ಸಚಿವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಜಾರಿನಿರ್ದೇಶನಾಲಯ ಅರ್ಪಿತ […]

ಕಚ್ಚಾಬಾಂಬ್ ತಯಾರಿಸಿ ಪ್ರಯೋಗ ಮಾಡುವ ವೇಳೆ ಸ್ಫೋಟ, ಇಬ್ಬರ ಸಾವು

ಕೋಲ್ಕತ್ತಾ, ಜು.18- ಕಚ್ಚಾಬಾಂಬ್ ತಯಾರಿಸಿ ಪ್ರಯೋಗ ಮಾಡುವ ವೇಳೆ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟು ಒಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಗೋಪಾಲಪುರದ ಮಾಲ್ಡಾಸ್ ಮಿನಿಚೌಕ್‍ನಲ್ಲಿ ನಿನ್ನೆ ಮಧ್ಯರಾತ್ರಿ 2.30ರ ಸುಮಾರಿನಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಒಟ್ಟು ಮೂವರು ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಾಳುವನ್ನು ಮಾಲ್ಡಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿದಾಗ ಒಟ್ಟು ನಾಲ್ಕು ಶಸ್ತ್ರಾಸ್ತ್ರಗಳು […]