Sunday, April 28, 2024
Homeರಾಷ್ಟ್ರೀಯಬಲವಂತವಾಗಿ ಭೂ ಕಬಳಿಕೆ:ಟಿಎಂಸಿ ನಾಯಕ ಶಾಜಹಾನ್ ಬಂಧನ

ಬಲವಂತವಾಗಿ ಭೂ ಕಬಳಿಕೆ:ಟಿಎಂಸಿ ನಾಯಕ ಶಾಜಹಾನ್ ಬಂಧನ

ಕೋಲ್ಕತಾ, ಫೆ 26: ಭೂ ಕಬಳಿಕೆ ಮಾಡಲು ಬಂದ ಟಿಎಂಸಿ ನಾಯಕರನ್ನು ಅಟ್ಟಾಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಪಶ್ಚಿಮ ಬಂಗಾಳ ಪೊಲೀಸರು ಅವರನ್ನು ಉತ್ತರ 24 ಪರಗಣ ಜಿಲ್ಲೆಯ ಸಂದೇಶಾಖಾಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಜಿತ್ ಮೈತಿ, ಶಹಜಹಾನ್ ಶೇಖ್ ಅವರ ಆಪ್ತ ಹಾಯಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯ ಮೇಲೆ ಶಹಜಹಾನ್ ಶೇಖ್ ದೌರ್ಜನ್ಯ ನಡೆಸಿದರಿಂದ ಕುಪಿತಗೊಂಡ ಗ್ರಾಮಸ್ಥರು ಟಿಎಂಸಿ ನಾಯಕರನ್ನು ಬೆನ್ನಟ್ಟಿದ ನಂತರ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಶೆಡ್‍ನಲ್ಲಿ ಕೂಡಿಹಾಕಿ ಬೀಗ ಜಡಿಯಲಾಗಿತ್ತು. ಭೂ ಕಬಳಿಕೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ದೂರುಗಳು ಬಂದ ನಂತರ ನಾವು ಅವನನ್ನು ಬಂಧಿಸಿದ್ದೇವೆ. ನಂತರ ನಾವು ಅತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಬಿಜೆಪಿಯಿಂದ ಸುಮಲತಾ ಅಂಬರೀಶ್ ಬೀದಿಪಾಲು ; ಲಕ್ಷ್ಮಣ್

ಸುಮಾರು 70 ಕ್ಕೂ ಹೆಚ್ಚು ದೂರುಗಳು ಶಾಜಹಾನ್ ವಿರುದ್ದ ದಾಖಲಾಗಿದ್ದು ತಮ್ಮ ಭೂಮಿಯನ್ನು ಬಲವಂತವಾಗಿ ಸ್ವಾೀಧಿನಪಡಿಸಿಕೊಳ್ಳಲು ಆತ ಪ್ರಯತ್ನಿಸಿದ ಮತ್ತು ಸ್ಥಳೀಯ ಮಹಿಳೆಯರನ್ನು ಹಿಂಸಿಸಿದ್ದಾನೆ ಎಂದು ಹೇಳಿದರು. ಎಚ್ಚೆತ್ತ ಟಿಎಂಸಿ ನಿಯೋಗವು ಪ್ರಕ್ಷುಬ್ಧ ಸಂದೇಶಖಾಲಿಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದ ನಂತರ ಪೊಲೀಸ್ ಕ್ರಮ ಕೈಗೊಂಡಿದ್ದಾರೆ.

ಕೋಲ್ಕತಾದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಸುಂದರ್‍ಬನ್ಸ್‍ನ ಗಡಿಯಲ್ಲಿರುವ ಸಂದೇಶ್‍ಖಾಲಿ ಪ್ರದೇಶವು ತಲೆಮರೆಸಿಕೊಂಡಿರುವ ಷಹಜಹಾನ್ ಮತ್ತು ಅವರ ಬೆಂಬಲಿಗರ ವಿರುದ್ಧ ಪ್ರತಿಭಟನೆಗಳು ತಿಳಿಸಿವೆ.

RELATED ARTICLES

Latest News