ಹುಟ್ಟುಹಬ್ಬದ ಪಾರ್ಟಿ ಮೇಲೆ ಗುಂಡಿನ ದಾಳಿ, 8 ಮಂದಿ ಸಾವು

ಜೋಹಾನ್ಸ್‍ಬರ್ಗ್,ಜ.30-ಹುಟ್ಟುಹಬ್ಬದ ಪಾರ್ಟಿ ಮೇಳೆ ಬಂದೂಕುಧಾರಿಗಳ ನಡೆಸಿದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿ, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಪೋರ್ಟ್ ಎಲಿಜಬೆತ್‍ನ ದಕ್ಷಿಣ ಬಂದರು ನಗರವಾದ ಗೆಬರ್ಹಾದಲ್ಲಿ ಭಾನುವಾರ ಸಂಜೆ ಮನೆ ಮಾಲೀಕರು ಹುಟ್ಟು ಹಬ್ಬದ ಸಂಭ್ರದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಎಂಟ್ರಿಯಾದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಮನೆ ಮಾಲೀಕರು ಬಲಿಯಾಗಿದ್ದಾರೆ. ಒಟ್ಟು […]