Sunday, April 26, 2026
Homeರಾಷ್ಟ್ರೀಯರಣರಂಗವಾದ ಹುಟ್ಟುಹಬ್ಬದ ಪಾರ್ಟಿ, ಗುಂಡು ಹಾರಿಸಿ ಮೂವರ ಹತ್ಯೆ

ರಣರಂಗವಾದ ಹುಟ್ಟುಹಬ್ಬದ ಪಾರ್ಟಿ, ಗುಂಡು ಹಾರಿಸಿ ಮೂವರ ಹತ್ಯೆ

UP triple murder: 3 shot dead after cake-smearing dispute at birthday party inside gym

ಬುಲಂದ್‌ಶಹರ್, ಏ.26: ಹುಟ್ಟುಹಬ್ಬದ ಆಚರಿಸುತ್ತಿದ್ದ ಸ್ನೇಹಿತರ ನಡುವಿನ ಸಣ್ಣ ಭಿನ್ನಾಭಿಪ್ರಾಯಕ್ಕೆ ಗುಂಡಿನ ಚಕಮಕಿ ನಡೆದು ಘರ್ಷಣೆ ಉಂಟಾಗಿ ದಾಳಿಯಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಖರ್ಜಾ ನಗರ ಪ್ರದೇಶದಲ್ಲಿ ನಡೆದಿದೆ.

ಘರ್ಷಣೆಯಲ್ಲಿ ಮನೀಶ್ ಸೈನಿ, ಆಕಾಶ್ ಸೈನಿ ಮತ್ತು ಅಮರದೀಪ್ ಸಾವನ್ನಪ್ಪಿರುವ ದುರ್ದೈವಿಗಳು. ನೆಹರೂಪುರ ಚುಂಗಿಯ ಸುಭಾಷ್ ರಸ್ತೆಯಲ್ಲಿರುವ ಜಿಮ್‌ನಲ್ಲಿ ಈ ಘಟನೆ ನಡೆದಿದ್ದು, ಜಿತು ಎಂಬ ಯುವಕ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಆದಾಗ್ಯೂ ಜಿತು ಮುಖಕ್ಕೆ ಕೇಕ್ ಹಚ್ಚಿದಾಗ ಪರಿಸ್ಥಿತಿ ನಾಟಕೀಯವಾಗಿ ಬದಲಾಗಿದೆ.

ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು ಹಿಂಸಾತ್ಮಕ ಘರ್ಷಣೆಗೆ ತಿರುಗಿದೆ. ಈ ನಡುವೆ ಕೆಲವರು ಮೂವರು ಯುವಕರನ್ನು ಗುರಿಯಾಗಿಸಿಕೊಂಡು ಅವರ ತಲೆಗೆ ಗುಂಡು ಹಾರಿಸಿದ್ದಾರೆ.

ಗುಂಡೇಟು ತಿಂದ ಮನೀಶ್ ಸೈನಿ, ಆಕಾಶ್ ಸೈನಿ ಮತ್ತು ಅಮರದೀಪ್ ಕುಸಿದು ಬಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸುದ್ದಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮೀಣ ಎಸ್ಪಿ ಆಂಟ್ರಿಕ್ ಜೈನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಿದ್ದಾರೆ.

ವಿಧಿವಿಜ್ಞಾನ ತಂಡಗಳು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿವೆ. ಪರಿಸ್ಥಿತಿಯ ಗಂಭೀರತೆಯ ಹಿನ್ನೆಲೆಯಲ್ಲಿ, ಶಂಕಿತರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವ ನಿರೀಕ್ಷೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News