Sunday, April 26, 2026
Homeರಾಷ್ಟ್ರೀಯವಿದ್ಯುತ್ ಉಳಿತಾಯ ಮತ್ತು ಹಸಿರು ಇಂಧನ ಇಂದಿನ ಅಗತ್ಯಗಳಾಗಿವೆ : ಪ್ರಧಾನಿ ಮೋದಿ

ವಿದ್ಯುತ್ ಉಳಿತಾಯ ಮತ್ತು ಹಸಿರು ಇಂಧನ ಇಂದಿನ ಅಗತ್ಯಗಳಾಗಿವೆ : ಪ್ರಧಾನಿ ಮೋದಿ

PM Modi celebrates nation’s global 4th rank in renewable energy, highlights massive expansion

ನವದೆಹಲಿ: ಏ.26: ವಿದ್ಯುತ್ ಉಳಿತಾಯ ಮತ್ತು ಹಸಿರು ಇಂಧನ ಬಳಕೆ ಇಂದಿನ ಅಗತ್ಯಗಳಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ತಮ್ಮ ‘ಮನ್ ಕಿ ಬಾತ್’ನಲ್ಲಿ ಭಾರತದ ಇಂಧನ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದ್ದಾರೆ.

ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯವಾಗಿವೆ. ಇದು ಕೇವಲ ಪರಿಸರ ರಕ್ಷಣೆಯ ಮಾತಲ್ಲ, ಇದು ನಮ್ಮ ಭವಿಷ್ಯವನ್ನು ರಕ್ಷಿಸುವ ಕುರಿತಾಗಿದೆ. ನಾವು ವಿದ್ಯುತ್ ಉಳಿತಾಯ ಮಾಡಬೇಕಿದೆ, ಶುದ್ಧ ಇಂಧನವನ್ನು ಅಳವಡಿಸಿಕೊಳ್ಳಬೇಕಿದೆ. ದೇಶದ ಪ್ರತಿಯೊಂದು ಹಂತದಲ್ಲೂ ಇಂತಹ ಪ್ರಯತ್ನಗಳು ಅವಶ್ಯಕವಾಗಿವೆ.

ದೇಶದ ಪ್ರಗತಿ ವಿಜ್ಞಾನದಿಂದ ಎಂದು ಭಾರತ ನಂಬಿದೆ. ಇದೇ ದೃಷ್ಟಿಕೋನದಿಂದ ವಿಜ್ಞಾನಿಗಳು ನಾಗರಿಕ ಪರಮಾಣು ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಅವರ ಪ್ರಯತ್ನಗಳು ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ಇದು ನಮ್ಮ ಕೈಗಾರಿಕಾ ಬೆಳವಣಿಗೆ, ಇಂಧನ ವಲಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಲಾಭ ದೊರೆತಿದೆ.

ಕೃಷಿಯಿಂದ ಆಧುನಿಕ ನಾವೀನ್ಯಕಾರರು ಸೇರಿದಂತೆ ಎಲ್ಲರಿಗೂ ಭಾರತದ ನಾಗರಿಕ ಪರಮಾಣು ಕಾರ್ಯಕ್ರಮವು ಸಾಕಷ್ಟು ಸಹಾಯ ಮಾಡಿದೆ. ಕೆಲವೇ ದಿನಗಳ ಹಿಂದೆ ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕ್ರಿಟಿಕಲಿಟಿಯನ್ನು ಸಾಧಿಸಿದೆ. ಅಂದರೆ ರಿಯಾಕ್ಟರ್ ಮೊದಲ ಬಾರಿಗೆ ಸ್ವಯಂ-ಸಮರ್ಥನೀಯ ಪರಮಾಣು ಸರಪಳಿ ಕ್ರಿಯೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಹಂತವನ್ನು ತಲುಪಿದೆ.

ಈ ಹಂತವು ರಿಯಾಕ್ಟರ್ ಕಾರ್ಯಾಚರಣೆಯ ಹಂತವನ್ನು ಪ್ರವೇಶಿಸುವುದನ್ನು ಸೂಚಿಸುತ್ತದೆ. ಇದು ಪರಮಾಣು ಶಕ್ತಿ ಪಯಣದಲ್ಲಿ ಭಾರತಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಇಷ್ಟೇ ಅಲ್ಲದೆ, ಪರಮಾಣು ರಿಯಾಕ್ಟರ್ ಅನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದು ಶಕ್ತಿಯ ಉತ್ಪಾದನೆ ಜೊತೆಗೆ, ಭವಿಷ್ಯಕ್ಕಾಗಿ ಹೊಸ ಇಂಧನವನ್ನು ಉತ್ಪಾದಿಸುವ ವ್ಯವಸ್ಥೆಯಾಗಿದೆ ಎಂದಿದ್ದಾರೆ.

ಮಾರ್ಚ್ 2024 ರಲ್ಲಿ ಕಲ್ಪಾಕ್ಕಂನಲ್ಲಿ ರಿಯಾಕ್ಟರ್ ಕೋರ್ ಲೋಡಿಂಗ್ ಅನ್ನು ವೀಕ್ಷಿಸಿದ ಸಮಯವನ್ನು ನನಗೆ ಸ್ಪಷ್ಟವಾಗಿ ನೆನಪಿದೆ. ಭಾರತದ ಪರಮಾಣು ಕಾರ್ಯಕ್ರಮಕ್ಕೆ ಅಮೂಲ್ಯ ಕೊಡುಗೆ ನೀಡಿದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ದೇಶವಾಸಿಗಳ ಜೀವನವನ್ನು ಉತ್ತಮ ಮತ್ತು ಸುಲಭಗೊಳಿಸಲು ಅವರ ಪ್ರಯತ್ನಗಳು ಅತ್ಯಂತ ಶ್ಲಾಘನೀಯವಾಗಿವೆ. ಇದರಿಂದ ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಸಂಕಲ್ಪಕ್ಕೆ ಮತ್ತಷ್ಟು ಚೈತನ್ಯ ದೊರೆಯುತ್ತದೆ.

ಇಂದು ತಾವು ಅದೃಶ್ಯವಾದ ಒಂದು ಶಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ. ಅದಿಲ್ಲದೆ ನಮ್ಮ ಜೀವನ ಒಂದು ಕ್ಷಣವೂ ಉಳಿಯಲಾರದು. ಈ ಶಕ್ತಿ ಭಾರತವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಅದೇ ನಮ್ಮ ಪವನ ಶಕ್ತಿ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ‘ವಾಯುರ್ವಾ ಇತಿ ವ್ಯಷ್ಟಿಃ, ವಾಯುರೇವ ಸಮಷ್ಟಿಃ’. ಅಂದರೆ ಗಾಳಿಯು ಕೇವಲ ಒಂದು ಅಂಶವಲ್ಲ, ಅದು ಜೀವನದ ಶಕ್ತಿ, ಅದು ಬ್ರಹ್ಮಾಂಡದ ಶಕ್ತಿ ಎಂದು ಉಲ್ಲೇಖಿಸಲಾಗಿದೆ.

ಈ ಪವನ ಶಕ್ತಿಯೇ ಭಾರತದ ಅಭಿವೃದ್ಧಿಯ ಹೊಸ ಗಾಥೆಯನ್ನು ಬರೆಯುತ್ತಿದೆ. ಭಾರತ ಇತ್ತೀಚೆಗೆ ಪವನ ಶಕ್ತಿಯಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಭಾರತದ ಪವನ ಶಕ್ತಿ ಉತ್ಪಾದನಾ ಸಾಮರ್ಥ್ಯವು ಈಗ 56 ಗಿಗಾ ವಾಟ್‌ಗಳನ್ನು ಮೀರಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 6 ಗಿಗಾವ್ಯಾಟ್‌ಗಳಷ್ಟು ಸಾಮರ್ಥ್ಯವನ್ನು ಹೊಸದಾಗಿ ಸೇರಿಸಲಾಗಿದೆ. ಪವನ ಶಕ್ತಿಯಲ್ಲಿ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಮತ್ತು ಜಗತ್ತು ನಮ್ಮ ಕಡೆಗೆ ದೃಷ್ಟಿ ನೆಟ್ಟಿದೆ ಎಂದಿದ್ದಾರೆ.

ಭಾರತ ಪವನ ಶಕ್ತಿ ಸಾಮರ್ಥ್ಯದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿದಂತೆ ದೇಶದ ಹಲವು ರಾಜ್ಯಗಳು ಈ ವಲಯದಲ್ಲಿ ಸಾಧನೆಯನ್ನು ಮೆರೆದಿವೆ. ಹಿಂದೆ ಮರುಭೂಮಿಗಳು ಮಾತ್ರ ಗೋಚರಿಸುತ್ತಿದ್ದಂತಹ ಗುಜರಾತ್‌ನ ಕಚ್, ಪಾಠಣ್ ಮತ್ತು ಬನಾಸ್ ಕಾಂತಾದಂತಹ ಪ್ರದೇಶಗಳು ಈಗ ದೊಡ್ಡ ನವೀಕರಿಸಬಹುದಾದ ಇಂಧನ ಉದ್ಯಾನವನಗಳಿಗೆ ನೆಲೆಯಾಗಿವೆ. ಯುವಕರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ, ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ಉದ್ಯೋಗಕ್ಕಾಗಿ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ ಎಂದು ವಿವರಿಸಿದ್ದಾರೆ.

RELATED ARTICLES

Latest News