ಪರಿಸರ ಸ್ನೇಹಿ ಧರಿಸಿನೊಂದಿಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ಭಾಗಿ

ನವದೆಹಲಿ,ಫೆ.8- ಸಂಸತ್ ಸುಗಮ ಕಲಾಪ ನಡುತ್ತಿರುವ ನಡುವೆ ರಾಷ್ಟ್ರಪತಿ ಅವರ ಭಾಷಣದ ಮೇಲೆ ನಡೆಯುತ್ತಿರುವ ಚರ್ಚೆಗೆ ಉತ್ತರಿಸಲು ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧರಿಸಿದ ಜಾಕೇಟ್ ಗಮನ ಸೆಳೆದಿದೆ. ರಾಷ್ಟ್ರಪತಿಗಳು ಸಂಸತ್‍ನ ಉಭಯ ಸದನಗಳನ್ನು ಉದ್ದೇಶಿಸಿ ವರ್ಷದ ಆರಂಭದಲ್ಲಿ ನಡೆದ ಕಲಾಪದಲ್ಲಿ ಭಾಷಣ ಮಾಡಿದರು. ಅದರ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ, ಡಿಎಂಕೆ ಸಂಸದರೆ ಕನ್ನಿಮೋಳಿ, ತೃಣಮೂಲ ಕಾಂಗ್ರೆಸ್‍ನ ಮಹುವಾ ಮಿತ್ರ ಚರ್ಚೆ ಮಾಡಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ಟೀಕಿಸಿದ್ದರು. […]