Thursday, February 22, 2024
Homeಕ್ರೀಡಾ ಸುದ್ದಿಖಾಲಿ ವಾಟರ್ ಬಾಟಲಿಗಳಿಂದ 'ನಮ್ಮ ಸಂವಿಧಾನ' ವರ್ಣ ಅಕ್ಷರ

ಖಾಲಿ ವಾಟರ್ ಬಾಟಲಿಗಳಿಂದ ‘ನಮ್ಮ ಸಂವಿಧಾನ’ ವರ್ಣ ಅಕ್ಷರ

ತುಮಕೂರು:- ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನ ಸಂಬಂಧ ತುಮಕೂರು ಜಿಲ್ಲೆಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅನುಪಯುಕ್ತವಾಗಿ ಇದ್ದಂತಹ 1,35,000 ಖಾಲಿ ಪ್ಲಾಸ್ಟಿಕ್ ಬಾಟಲುಗಳನ್ನು ಸಂಗ್ರಹಿಸಿದ್ದು ಇವುಗಳಿಂದ ವಿಶೇಷವಾಗಿ ನಮ್ಮ ಸಂವಿಧಾನ ಎಂಬುದಾಗಿ ಕನ್ನಡದ ಅಕ್ಷರ ವರ್ಣ ಮಾಲೆಗಳಲ್ಲಿ ವರ್ಣರಂಜಿತವಾಗಿ ಕ್ರಮಬದ್ದವಾಗಿ ಜೋಡಿಸಿ ” ನಮ್ಮ ಸಂವಿಧಾನ “ಎಂದು  ಜೋಡಿಸಲಾಗಿದೆ.

ಈ ಒಂದು ಪ್ಲಾಸ್ಟಿಕ್ ಬಾಟಲುಗಳಿಂದ ನಮ್ಮ ಸಂವಿಧಾನ ಎಂಬ ವಿಶೇಷ ಆಕೃತಿಯನ್ನು ಕನ್ನಡ ವರ್ಣಮಾಲೆಯಲ್ಲಿ ರಚಿಸಲು 305 ವಿದ್ಯಾರ್ಥಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರ ಸಿಬ್ಬಂದಿ ವರ್ಗದವರು ಶ್ರಮಿಸಿದ್ದಾರೆ. ನಮ್ಮ ಸಂವಿಧಾನ ಎಂಬ ವಿಶೇಷ ಕನ್ನಡ ವರ್ಣಮಾಲೆಯ ವಿಶೇಷ ಅಕೃತಿಯನ್ನು ಇದೇ ಪ್ರಥಮ ಬಾರಿಗೆ ಕರ್ನಾಟಕ ಮತ್ತು ಭಾರತದಲ್ಲಿ ಜೋಡಿಸಿರುವುದು ವಿಶೇಷವಾಗಿರುತ್ತದೆ.ಇದನ್ನು ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು, ನಾಗರೀಕರು, ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಇತ್ತೀಚೆಗೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ವತಿಯಿಂದ ಒಂದು ಲಕ್ಷ ವಾಟರ್ ಬಾಟಲಿಗಳಿಂದ ತುಮಕೂರು ಎಂಬ ಅಕ್ಷರ ನಿರ್ಮಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಬೆನ್ನೆಲೆ ಸಂವಿಧಾನ ದ ಮಹತ್ವವನ್ನು ಸಾಮಾನ್ಯ ಜನರಿಗೆ ತಿಳಿಸುವ ಸಲುವಾಗಿ ಜಿಲ್ಲಾಧ್ಯಾಂತ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮಾಡುತ್ತಿದ್ದು ಇದೀಗ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಮಟ್ಟದ ಖಾಲಿ ವಾಟರ್ ಬಾಟಲಿಗಳಿಂದ ದಾಖಲೆ ನಿರ್ಮಿಸಿರುವುದು ಶ್ಲಾಘನೀಯ ಎಂದು ಸಮಾಜ ಕಲ್ಯಾಣ ಇಲಾಖೆ ಯ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಬ್ರಿಟನ್ ರಾಜ ಚಾರ್ಲ್ಸ್

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಭು ಅವರು ನಮ್ಮ ಸಂವಿಧಾನ ಅಕ್ಷರ ನಿರ್ಮಾಣಕ್ಕೆ ಶ್ರಮಿಸಿದ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನೆ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಇತರರು ಉಪಸ್ಥಿತರಿದ್ದರು.

RELATED ARTICLES

Latest News