Sunday, May 5, 2024
Homeಅಂತಾರಾಷ್ಟ್ರೀಯಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಬ್ರಿಟನ್ ರಾಜ ಚಾರ್ಲ್ಸ್

ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಬ್ರಿಟನ್ ರಾಜ ಚಾರ್ಲ್ಸ್

ಲಂಡನ್,ಫೆ.6- ಬ್ರಿಟನ್ ರಾಜ ಚಾಲ್ರ್ಸ್ -3 ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್ ಹ್ಯಾಮ್ ಅರಮನೆ ಅಧಿಕೃತವಾಗಿ ತಿಳಿಸಿದೆ. 75 ವರ್ಷದ ರಾಜ ಚಾಲ್ರ್ಸ್ -3 ಅವರಿಗೆ ಯಾವ ರೀತಿಯ ಕ್ಯಾನ್ಸರ್ ಇದೆ ಎಂದು ಮಾಹಿತಿ ನೀಡಿಲ್ಲ. ಕ್ಯಾನ್ಸರ್‍ಗೆ ಒಳಗಾಗಿರುವ ಕಿಂಗ್ ಚಾಲ್ರ್ಸ್ ಐಐಐ ಸಾರ್ವಜನಿಕ ಭೇಟಿಯನ್ನು ರದ್ದು ಮಾಡಿದ್ದಾರೆ. ಆದರೆ ರಾಜ್ಯ ವ್ಯವಹಾರವನ್ನು ಮುಂದುವರಿಸುತ್ತಾರೆ, ಇದರ ಜೊತೆಗೆ ರಾಷ್ಟ್ರದ ಮುಖ್ಯಸ್ಥನಾಗಿ ತನ್ನ ಸಾಂವಿಧಾನಿಕ ಪಾತ್ರಗಳನ್ನು ಯಾರಿಗೂ ಹಸ್ತಾಂತರಿಸುವುದಿಲ್ಲ ಎಂದು ಹೇಳಿದೆ.

ಕಳೆದ ತಿಂಗಳು ಕಿಂಗ್ ಚಾಚಾಲ್ರ್ಸ್ ಅವರನ್ನು ಲಂಡನ್ ಆಸ್ಪತ್ರೆಯಲ್ಲಿ ಮೂರು ದಿನಗಳು ಚಿಕಿತ್ಸೆ ನೀಡಲಾಗಿತ್ತು, ಈ ವೇಳೆ ಪ್ರತ್ಯೇಕ ಕಾಳಜಿಯ ಸಮಸ್ಯೆಯಿದೆ ಎಂದು ಅರಮನೆ ಹೇಳಿದೆ. ಜೊತೆಗೆ ರೋಗ ನಿರ್ಣಯ ಪರೀಕ್ಷೆಗಳು ಕ್ಯಾನ್ಸರ್‍ನ ಒಂದು ರೂಪವನ್ನು ಗುರುತಿಸಿವೆ ಎಂದು ಬಕಿಂಗ್ ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.

ಕಿಂಗ್ ಚಾಲ್ರ್ಸ್ ತಮ್ಮ ನಿಯಮಿತ ಚಿಕಿತ್ಸೆಗಳ ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರ ಭೇಟಿಯ ಕರ್ತವ್ಯಗಳನ್ನು ಮುಂದೂಡಲು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ಆದರೆ, ಈ ಅವಧಿಯುದ್ದಕ್ಕೂ ಅವರು ಎಂದಿನಂತೆ ರಾಜ್ಯ ವ್ಯವಹಾರ ಮತ್ತು ಅಧಿಕೃತ ದಾಖಲೆಗಳನ್ನು ಕೈಗೊಳ್ಳುವುದನ್ನು ಮುಂದುವರಿಸುತ್ತಾರೆ. ರಾಜನಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಕಿಂಗ್ ಹ್ಯಾಮ್ ಅರಮನೆ ಮಾಹಿತಿ ನೀಡಿದೆ.

ಕಿಂಗ್ ಚಾಲ್ರ್ಸ್ ಚಿಕಿತ್ಸೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾರ್ವಜನಿಕ ಕರ್ತವ್ಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಊಹಾಪೋಹಗಳನ್ನು ತಡೆಗಟ್ಟಲು ತನ್ನ ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಇದನ್ನು ತಿಳಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ಕ್ಯಾನ್ಸರ್‍ನಿಂದ ಬಳಲುತ್ತಿರುವ ಎಲ್ಲರಿಗೂ ಇದು ಸಾರ್ವಜನಿಕ ತಿಳುವಳಿಕೆಗೆ ಸಹಾಯ ಮಾಡುತ್ತದೆ ಎಂದು ಅರಮನೆ ತಿಳಿಸಿದೆ.

ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದಾಗ ಚಾಲ್ರ್ಸ್ ರಾಜರಾಗಿ ಪದಗ್ರಹಣ ಮಾಡಿದ್ದರು. ಇನ್ನು, ಬ್ರಿಟನ್ ರಾಜನಿಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಹಲವಾರು ದೇಶಗಳ ನಾಯಕರು ಕಿಂಗ್ ಚಾಲ್ರ್ಸ್ ಐಐಐ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

10 ವರ್ಷಗಳಲ್ಲಿ ಏಕೆ ಮೋದಿ ಗ್ಯಾರಂಟಿ ನೀಡಿರಲಿಲ್ಲ..? : ಸಿಎಂ ಸಿದ್ದರಾಮಯ್ಯ

ಕಿಂಗ್ ಚಾಲ್ರ್ಸ್‍ಗೆ 75 ವರ್ಷ:
ರಾಣಿ ಎಲಿಜಬೆತ್ ಐಐ ರ ಮರಣದ ನಂತರ, ಕಿಂಗ್ ಚಾಲ್ರ್ಸ್ ಬ್ರಿಟನ್‍ನ ರಾಜನಾದರು. ಕಳೆದ ವರ್ಷ ಮೇ ತಿಂಗಳಲ್ಲಿ ಅವರು ಪಟ್ಟಾಭಿಷಿಕ್ತರಾದರು. ಇದರ ನಂತರ ಅವರನ್ನು ಕಿಂಗ್ ಚಾಲ್ರ್ಸ್ ಐಐಐ ಎಂದು ಸಂಬೋಧಿಸಲಾಗಿದೆ.

ಚಾಲ್ರ್ಸ್ 14 ನವೆಂಬರ್ 1948ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಜನಿಸಿದರು. ಅವರ ತಾಯಿ ರಾಣಿ ಎಲಿಜಬೆತ್ ಐಐ ಪಟ್ಟ ಅಲಂಕರಿಸಿದಾಗ ಅವರು 4 ವರ್ಷ ವಯಸ್ಸಿನವರಾಗಿದ್ದರು. 1969 ರ 20 ನೇ ವಯಸ್ಸಿನಲ್ಲಿ, ಅವರನ್ನು ಕೇರ್ಫಾರ್ನಾನ್ ಕ್ಯಾಸಲ್‍ನಲ್ಲಿ ರಾಣಿ ವೇಲ್ಸ ರಾಜಕುಮಾರ ಎಂದು ನೇಮಿಸಿದರು.

ಚಾಲ್ರ್ಸ್ 29 ಜುಲೈ 1981ರಂದು ಡಯಾನಾ ಅವರನ್ನು ವಿವಾಹವಾದರು. ಆ ಮದುವೆಯಿಂದ ಅವರ ಇಬ್ಬರು ಪುತ್ರರಾದ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿ ಜನಿಸಿದರು. ಮದುವೆಯು 28 ಆಗಸ್ಟ್ 1996ರಂದು ಮುರಿದು ಬಿತ್ತು. ಏಪ್ರಿಲ್ 9, 2005ರಂದು, ಅವರು ಕ್ಯಾಮಿಲ್ಲಾ ಅವರನ್ನು ವಿವಾಹವಾದರು.

RELATED ARTICLES

Latest News