ಕೆಲಸ-ಕಾರ್ಯ ಬಹಿಷ್ಕರಿಸಿದ ಮಹಾನಗರ ಪಾಲಿಕೆ ನೌಕರರು

ಬೆಂಗಳೂರು, ಸೆ.14- ಆರೋಗ್ಯ ಸಂಜೀವಿನಿ ಯೋಜನೆ ಯಿಂದ ಹೊರಗಿಟ್ಟಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯದ 10 ಮಹಾನಗರ ಪಾಲಿಕೆಗಳ ಎರಡು ಲಕ್ಷಕ್ಕೂ ಹೆಚ್ಚು ನೌಕರರು ಹಾಗೂ ಪೌರ ಕಾರ್ಮಿಕರು ಇಂದಿನಿಂದ ಕೆಲಸ ಕಾರ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ. ತುಮಕೂರು, ಮೈಸೂರು, ಹುಬ್ಬಳಿ-ಧಾರವಾಡ ಸೇರಿದಂತೆ 10 ಮಹಾನಗರ ಪಾಲಿಕೆಗಳ ಲಕ್ಷಾಂತರ ನೌಕರರು ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದಿಂದ ಇದೆಂಥಾ ಒಡೆದು ಆಳುವ ದ್ವಂದ್ವ ನೀತಿ, ಸರ್ಕಾರಿ ನೌಕರರ […]

ದಸರಾ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಮಾವುತ, ಕಾವಾಡಿಗರ

ಮೈಸೂರು/ಕುಶಾಲನಗರ,ಆ.1- ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಾಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಆನೆ ಮಾವುತ, ಕಾವಾಡಿಗರ ಸಂಘ ನಿರ್ಧರಿಸಿದೆ. ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಇದುವರೆಗೂ ಈಡೇರದ ಕಾರಣ ಈ ಬಾರಿ ದಸರಾಗೆ ಸಾಕಾನೆಗಳನ್ನು ಕಳುಹಿಸದೆ ಪ್ರತಿಭಟನೆ ನಡೆಸಲು ದುಬಾರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ತಿಳಿಸಿದ್ದಾರೆ. ಆ.7ರಂದು […]