ಕಟೀಲ್ ಹೇಳಿಕೆ ಟೀಕಿಸಿದ ಡಿಕೆಶಿ

ಬೆಂಗಳೂರು, ಫೆ.10- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹತಾಶೆಯಿಂದ ಟಿಪ್ಪು ಹಾಗೂ ಸಾವರ್ಕರ್ ನಡುವಿನ ಚುನಾವಣೆ ಎಂದು ಹೇಳಿಕೆ ನೀಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟೀಲ್ ಅವರು ಹತಾಶರಾಗಿದ್ದಾರೆ ಎಂಬುದಕ್ಕ್ಕೆ ಅವರ ಹೇಳಿಕೆಗಿಂತಬೇರೆ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು. ಸರ್ಕಾರದ ಭ್ರಷ್ಟಾಚಾರ, ಜನರಿಗೆ ಉದ್ಯೋಗ, ನಾಡಿನ ಶಾಂತಿ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಅವರು ಆ ರೀತಿ ಮಾತನಾಡುತ್ತಿಲ್ಲ. ಬದುಕು ಮತ್ತು ಭಾವನೆ ಎಂದು ನಾವು ಮೊದಲೇ ಹೇಳಿದ್ದೇವೆ. […]
ಕಾಂಗ್ರೆಸ್ ಮಹಿಳಾ ನಾಯಕಿಯರ ಸಮಾವೇಶಕ್ಕೆ ಪ್ರಿಯಾಂಕ ಗಾಂಧಿ

ಬೆಂಗಳೂರು,ಜ.9- ನಗರದಲ್ಲಿ ನಡೆಯುವ ಮಹಿಳಾ ನಾಯಕಿಯರ ಸಮಾವೇಶದಲ್ಲಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ 16ರಂದು ನಗರದ ಅರಮನೆ ಮೈದಾನದಲ್ಲಿ ಮಹಿಳಾ ನಾಯಕಿಯರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯತ್, ಸಹಕಾರ ಸಂಘಗಳು ಸೇರಿದಂತೆ ಸಂಸತ್‍ವರೆಗೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಹೆಣ್ಣುಮಕ್ಕಳು ಭಾಗವಹಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಹಿಳಾ ನಾಯಕಿಯರ ಕೊಡುಗೆಗಳ […]