ರಕ್ಷಣಾ ಇಲಾಖೆಯ ಕಪ್ಪು ಪಟ್ಟಿ ಸೇರಿದ ಬೆಂಗಳೂರು ಮೂಲದ ಏವಿಯೇಷನ್ ಸಂಸ್ಥೆ

ನವದೆಹಲಿ,ಡಿ.10- ಅಗಸ್ಟಾ ವೆಸ್ಟ್‍ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರು ಮೂಲದ ಸಂಸ್ಥೆಯೊಂದಿಗಿನ 58 ಸಾವಿರ ಕೋಟಿ ರೂ.ಗಳ ವ್ಯಾಪಾರ ವಹಿವಾಟನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದೆ. ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‍ಗಳನ್ನು ಪೂರೈಸುವ 3,546 ಕೋಟಿ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2019 ರಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಸುಷೇನ್ ಗುಪ್ತಾ ಎಂಬುವರು ಬಿಡುಗಡೆಯಾದ ನಂತರ ಬೆಂಗಳೂರಿನಲ್ಲಿ ನಡೆಸುತ್ತಿರುವ ಡೆಫ್ಸಿಸ್ ಎಂಬ ಸಂಸ್ಥೆಯನ್ನು ಅಮಾನತುಗೊಳಿಸಿದ ಸಂಸ್ಥೆಗಳ ಪಟ್ಟಿಗೆ ರಕ್ಷಣಾ ಇಲಾಖೆ ಸೇರಿಸಿದೆ. […]