ನೇರ ತೆರಿಗೆ ಸಂಗ್ರಹದಲ್ಲಿ ಶೇ.22ರಷ್ಟು ಬೆಳವಣಿಗೆ

ನವದೆಹಲಿ,ಮಾ.11- ದೇಶದ ಆರ್ಥಿಕತೆ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು, ಚಾಲ್ತಿಯಲ್ಲಿರುವ ಆರ್ಥಿಕ ವರ್ಷದಲ್ಲಿ ಹಿಂದಿನ ವರ್ಷಕ್ಕಿಂತಲೂ ಶೇ.22.58ರಷ್ಟು ನೇರ ತೆರಿಗೆ ಸಂಗ್ರಹವಾಗಿದೆ. ಕಳೆದ ಏಪ್ರಿಲ್ 1ರಿಂದ ನಿನ್ನೆಯವರೆಗೆ ದೇಶದಲ್ಲಿ ಒಟ್ಟು 16.68 ಲಕ್ಷ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತಲೂ ಶೇ.22.58ರಷ್ಟು ಸಂಪನ್ಮೂಲ ಸಂಗ್ರಹ ವೃದ್ಧಿಯಾಗಿದೆ. ನಿವ್ವಳ ಸಂಗ್ರಹ 13.73 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಶೇ.16.78ರಷ್ಟು ಬೆಳವಣಿಗೆ ದಾಖಲಿಸಿದೆ. 2.95 ಲಕ್ಷ ಕೋಟಿ ರೂಪಾಯಿಯನ್ನು ಮರುಪಾವತಿಸಲಾಗಿದೆ. ಇದು ಕಳೆದ ವರ್ಷಕ್ಕಿಂತಲೂ ಶೇ.59.44ರಷ್ಟು ಹೆಚ್ಚಾಗಿದ್ದು, ದಾಖಲಾರ್ಹ […]