Thursday, December 5, 2024
Homeರಾಷ್ಟ್ರೀಯ | Nationalದೇಶದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಭಾರಿ ಏರಿಕೆ

ದೇಶದಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಭಾರಿ ಏರಿಕೆ

India’s net Direct Tax Collections up 18.35%

ನವದೆಹಲಿ, ಅ. 13– ನೇರ ತೆರಿಗೆ ಸಂಗ್ರಹದಲ್ಲಿ ಭಾರಿ ಏರಿಕೆ ಕಂಡುಬದಿದೆ. ದೇಶದಲ್ಲಿ ಎಲ್ಲ ರೀತಿಯ ತೆರಿಗೆಗಳ ಸಂಗ್ರಹ ಗಣನೀಯವಾಗಿ ಹೆಚ್ಚುತ್ತಿದೆ. ಮೊನ್ನೆ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸಂಗ್ರಹವಾದ ನಿವ್ವಳ ನೇರ ತೆರಿಗೆಯಲ್ಲಿ ಶೇ. 18.35ರಷ್ಟು ಹೆಚ್ಚಳವಾಗಿರುವುದು ದೃಢಪಟ್ಟಿದೆ.

ಏಪ್ರಿಲ್ 1ರಿಂದ ಅಕ್ಟೋಬರ್ 10ರವರೆಗೆ 11.25 ಲಕ್ಷ ರೂನಷ್ಟು ನಿವ್ವಳ ನೇರ ತೆರಿಗೆಯನ್ನು ಸರ್ಕಾರ ಪಡೆದುಕೊಂಡಿದೆ. ಇದು ರೀಫಂಡ್ ಕಳೆದು ಸರ್ಕಾರದ ಬೊಕ್ಕಸಕ್ಕೆ ಸೇರಿದ ತೆರಿಗೆ ಸಂಗ್ರಹವಾಗಿದೆ. ಒಟ್ಟು ತೆರಿಗೆ ಸಂಗ್ರಹ 13.57 ಲಕ್ಷ ರೂ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿಆಗಿದ್ದ ಒಟ್ಟು ಟ್ಯಾಕ್ಸ್ ಅಥವಾ ಒಟ್ಟು ತೆರಿಗೆ ಸಂಗ್ರಹದಲ್ಲಿ ಶೇ. 22.30ರಷ್ಟು ಏರಿಕೆ ಆಗಿದೆ.

ಭಾರತದಲ್ಲಿರುವ ನೇರ ತೆರಿಗೆಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್, ಡಿವಿಡೆಂಡ್ ಟ್ಯಾಕ್ಸ್, ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಇವೆ. ಇದರಲ್ಲಿ ಸರ್ಕಾಕ್ಕೆ ಅತಿಹೆಚ್ಚು ವರಮಾನ ತರುವುದು ಪರ್ಸನಲ್ ಇನ್ಕಮ್ ಟ್ಯಾಕ್ಸ್ ಮತ್ತು ಕಾರ್ಪೊರೇಟ್ ಟ್ಯಾಕ್ಸ್ ಆಗಿದೆ.

2024-25ರ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸಂಗ್ರಹವಾದ 11.25 ಲಕ್ಷ ಕೋಟಿ ರೂ ಮೊತ್ತದ ನಿವ್ವಳ ನೇರ ತೆರಿಗೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ 5.98 ಲಕ್ಷ ಕೋಟಿ ರೂ ಮೊತ್ತದಷ್ಟಿದೆ. ಕಾರ್ಪೊರೇಟ್ ತೆರಿಗೆ ಪಾಲು 4.94 ಲಕ್ಷ ಕೋಟಿ ರೂನಷ್ಟಿದೆ. 2023-24ರ ವರ್ಷದಲ್ಲಿ ಇದೇ ಅವಧಿಯಲ್ಲಿ ನಿವ್ವಳ ತೆರಿಗೆ ಸಂಗ್ರ 9.51 ಲಕ್ಷ ಕೋಟಿ ರೂ ಇತ್ತು.
2024-25ರಲ್ಲಿ ಅ. 10ರವರೆಗೆ ಸಂಗ್ರಹವಾದ ನೇರ ತೆರಿಗೆಗಳ ವಿವರ
ಒಟ್ಟು ತೆರಿಗೆ ಸಂಗ್ರಹ: 13,57,111 ಕೋಟಿ ರೂ
ಕಾರ್ಪೊರೇಟ್ ಟ್ಯಾಕ್ಸ್ : 6,11,161 ಕೋಟಿ ರೂ
ಪರ್ಸನಲ್ ಇನ್ಕಮ್ ಟ್ಯಾಕ್ಸ್: 7,13,142 ಕೋಟಿ ರೂ
ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ : 30,630 ಕೋಟಿ ರೂ
ಇತರೆ: 2,178 ಕೋಟಿ ರೂ

ಈ ಪೈಕಿ 2,31,150 ಕೋಟಿ ರೂರೀಫಂಡ್ ಗಳನ್ನು ಮಾಡಲಾಗಿದೆ. ಇದನ್ನು ಕಳೆದು ಉಳಿದ ನಿವ್ವಳ ನೇರ ತೆರಿಗೆ ಸಂಗ್ರಹ 11,25,961 ಕೋಟಿ ರೂ ಎಂದು ಸರ್ಕಾರ ಅಕ್ಟೋಬರ್ 11ರಂದು ಬಿಡುಗಡೆ ಮಾಡಿದ ದತ್ತಾಂಶದಿAದ ತಿಳಿದುಬರುತ್ತದೆ.

ರೀಫಂಡ್ ನಲ್ಲಿ ಈ ಬಾರಿ ಗಣನೀಯವಾಗಿ ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1.58 ಲಕ್ಷ ರೂ ನಷ್ಟು ರೀಫಂಡ್ ಮಾಡಲಾಗಿತ್ತು. ಈ ಬಾರಿ 2.31 ಲಕ್ಷ ಕೋಟಿ ರೂ ಆಗಿದೆ. ರೀಫಂಡ್ ನಲ್ಲಿ ಶೇ. 46ರಷ್ಟು ಹೆಚ್ಚಳವಾಗಿದೆ. ಆದರೂ ಕೂಡ ನಿವ್ವಳ ನೇರ ತೆರಿಗೆಯಲ್ಲಿ ಶೇ. 18.35ರಷ್ಟು ಹೆಚ್ಚು ಸಂಗ್ರಹವಾಗಿರುವುದು ಗಮನಾರ್ಹ…

RELATED ARTICLES

Latest News