ಅರಬ್‍ನೊಂದಿಗಿನ ಬಾಂಧವ್ಯ ಮತ್ತಷ್ಟು ಸದೃಢ : ಪ್ರಧಾನಿ ಮೋದಿ

ನವದೆಹಲಿ,ಫೆ.19- ಯುಎಇ ಜೊತೆಗಿನ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಸಿಇಪಿಎ) ಭಾರತೀಯ ಉದ್ಯಮಿಗಳಿಗೆ ಉತ್ತೇಜನ ನೀಡಿದೆ ಮತ್ತು ಕೊಲ್ಲಿ ರಾಷ್ಟ್ರದೊಂದಿಗಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ವರ್ಷ ಫೆಬ್ರವರಿ 18 ರಂದು ಪ್ರಧಾನಿ ಮೋದಿ ಮತ್ತು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜÁಯೆದ್ ಅಲ್ ನಹ್ಯಾನ್ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಸಿಇಪಿಎ ಒಪ್ಪಂದಕ್ಕೆ ಸಹಿ ಹಾಕಿದರು. IAS vs […]

ಡಿಜಿಟಲ್ ಪರಿವರ್ತನೆ ಮಹಿಳಾ ಉದ್ಯಮಿಗಳಿಗೆ ಹೊಸ ದಾರಿ: ಬೊಮ್ಮಾಯಿ

ಬೆಂಗಳೂರು,ಆ.2- ದೇವರು ಎಲ್ಲವನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು, ಮಹಿಳೆಯರನ್ನು ಸೃಷ್ಟಿಸಿದ. ಜೊತೆಯಲ್ಲಿ ಮಹಿಳೆಯರಿಗೆ ಸೃಷ್ಟಿಸುವ ಪರಮಾಧಿಕಾರವನ್ನು ದೇವರು ನೀಡಿದ್ದಾನೆ, ಮಹಿಳೆಯರು ಏನು ಬೇಕಾದರೂ ಸೃಷ್ಟಿಸುವ ಶಕ್ತಿ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸ್ವಸಹಾಯ ಸಂಘದ ಮೂಲಕ ಇಂದು ರಾಜ್ಯದ ಮಹಿಳೆಯರು ಬೆಳೆಸುತ್ತಿರುವ ಕಿರು ಉದ್ದಿಮೆಗಳಿಗೆ ಡಿಜಿಟಲ್ ತರಬೇತಿ ನೀಡುವ ಮೂಲಕ ಮಾರುಕಟ್ಟೆ ವ್ಯವಸ್ಥೆಯನ್ನು ಜಾಗತಿಕ ವಿಸ್ತರಿಸುವ ಕಾರ್ಯವನ್ನು UBUNTU & UNESCAP ಮಾಡುತ್ತಿದೆ ಎಂದು ತಿಳಿಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ UBUNTU & UNESCAP ಸಹಯೋಗದಲ್ಲಿ […]

ಕೆಎಸ್‍ಎಫ್‍ಸಿಯಿಂದ ಉದ್ದಿಮೆದಾರರಿಗೆ ಪ್ರೋತ್ಸಾಹ

ಬೆಂಗಳೂರು,ಜು.15- ರಾಜ್ಯದಲ್ಲಿ ಕೊರೊನಾ ನಂತರ ಉದ್ಯಮ ಕ್ಷೇತ್ರ ಚೇತರಿಕೆ ಕಂಡಿದ್ದು, ಪ್ರಸ್ತುತ ಕೆಎಸ್‍ಎಫ್‍ಸಿ ಕಡಿಮೆ ಬಡ್ಡಿ ದರದಲ್ಲಿ ಉದ್ಯಮಿಗಳಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದು ಪ್ರೋತ್ಸಾಹಿಸುತ್ತಿದೆ ಎಂದು ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕರೂಪ್ ಕೌರ್ ತಿಳಿಸಿದರು. ನಗರದಲ್ಲಿ ಕೆಎಸ್‍ಎಫ್‍ಸಿ ಶಾಖಾ ಕಚೇರಿ ಹಾಗೂ ಬೆಂಗಳೂರು ಗ್ರಾಮಾಂತರ ಶಾಖಾ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು […]