ಗೋವಾಕ್ಕೆ ಗೋಮಾಂಸ ರಫ್ತು ಮಾಡುತ್ತಿರುವುದಾಗಿ ಒಪ್ಪಿಕೊಂಡ ರಾಜ್ಯ ಸರ್ಕಾರ

ಬೆಂಗಳೂರು,ಫೆ.22-ರಾಜ್ಯದಿಂದ ಗೋವಾಕ್ಕೆ ಜಾನುವಾರುಗಳ ಮಾಂಸ ಕಳುಹಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಪಟ್ಟಂತಹ ಅಂಕಿ ಅಂಶಗಳನ್ನು ನೀಡಲು ಹಿಂದೇಟು ಹಾಕಿದೆ. ವಿಧಾನಪರಿಷತ್‍ನಲ್ಲಿ ಸದಸ್ಯ ಹರೀಶ್‍ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಜಾನುವಾರು ಮಾಂಸ ರಫ್ತು ಮಾಡುವ ಅಂಕಿಅಂಶ ಮಾಹಿತಿಗಳನ್ನು ನಿರ್ವಹಣೆ ಮಾಡುವುದಿಲ್ಲ. ಆದಾಗ್ಯೂ ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ, ಆರ್ಥಿಕ ಇಲಾಖೆಗಳಿಂದ ಮಾಹಿತಿ ಕೋರಲಾಗಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಗೋವಾಕ್ಕೆ ಮಾಂಸ ಕಳುಹಿಸುತ್ತಿರುವ […]

ಚೀನಾಗೆ ಔಷದೋಪಾಚಾರ ಪೂರೈಸಲು ಭಾರತ ಸಿದ್ಧ

ನವದೆಹಲಿ,ಡಿ..23- ಚೀನಾದಲ್ಲಿ ಕೋವಿಡ್ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಜ್ವರಕ್ಕೆ ಬಳಸಲಾಗುವ ಔಷಧಿಗಳ ಕೊರತೆ ಎದುರಾಗಿದ್ದು, ಅಗತ್ಯ ಸಂದರ್ಭದಲ್ಲಿ ಚೀನಾಗೆ ಔಷಧಿ ಪೂರೈಕೆ ಮಾಡಲು ಭಾರತ ಸಿದ್ಧವಿದೆ ಎಂದು ಸಿಡಿಎಸ್‍ಸಿಒ ತಿಳಿಸಿದೆ. ಚೀನಾದಲ್ಲಿ ಸುದೀರ್ಘ ಕ್ವಾರಂಟೈನ್, ವ್ಯಾಪಕ ಪರೀಕ್ಷೆ ಮತ್ತು ಬಲವಂತದ ಲಾಕ್‍ಡೌನ್ ತೆರವು ಮಾಡಿದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಮೂಲಗಳ ಪ್ರಕಾರ ಚೀನಾದಲ್ಲಿ 10 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಕಳೆದೆರಡು ದಿನಗಳಿಂದ ಸಾವಿನ ಪ್ರಕರಣ ವರದಿಯಾಗದೇ ಇದ್ದರೂ, ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ಹೆಚ್ಚಾಗಿದೆ. […]