Wednesday, April 24, 2024
Homeರಾಷ್ಟ್ರೀಯಭಾರತವು 30,000 ಟನ್ ಬಿಳಿ ಅಕ್ಕಿಯನ್ನು ಟಾಂಜಾನಿಯಾಕ್ಕೆ ರಫ್ತಿಗೆ ಅವಕಾಶ

ಭಾರತವು 30,000 ಟನ್ ಬಿಳಿ ಅಕ್ಕಿಯನ್ನು ಟಾಂಜಾನಿಯಾಕ್ಕೆ ರಫ್ತಿಗೆ ಅವಕಾಶ

ನವದೆಹಲಿ,ಮಾ.4 : ತಾಂಜಾನಿಯಾಗೆ 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ಮತ್ತು 80 ಸಾವಿರ ಟನ್ ಅಕ್ಕಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಪ್ರಕಟಣೆಯಲ್ಲಿದೆ.

ದೇಶೀಯ ಪೂರೈಕೆಯನ್ನು ಜುಲೈ 20, 2023 ರಿಂದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತುಗಳನ್ನು ನಿಷೇಧಿಸಲಾಗಿತ್ತು ಅದರೆ ಈಗ ಕೆಲ ಸಂಸ್ಥೆಗಳು ವಿನಂತಿ ಮಾಡಿ ಕೆಲವು ದೇಶಗಳಿಗೆ ತಮ್ಮ ಆಹಾರದ ಅವಶ್ಯಕತೆಗಳನ್ನು ಪೂರೈಸಲು ಅನುಮತಿ ಕೇಳಿತ್ತು ಅದರಂತೆ ರಫ್ತುಗಳನ್ನು ಅನುಮತಿಸಲಾಗಿದೆ. ತಾಂಜಾನಿಯಾ ಪೂರ್ವ ಆಫ್ರಿಕಾದ ರಾಷ್ಟ್ರವಾಗಿದ್ದು, ದಕ್ಷಿಣ ಆಫ್ರಿಕಾದ ಖಂಡದ ಈಶಾನ್ಯ ಕರಾವಳಿಯಲ್ಲಿದೆ.ಗಿನಿಯಾ-ಬಿಸ್ಸಾವು ಪಶ್ಚಿಮ ಆಫ್ರಿಕಾದ ಉಷ್ಣವಲಯದ ದೇಶವಾಗಿದೆ. ಅಧಿಸೂಚನೆಯ ಪ್ರಕಾರ, 30,000 ಟನ್ ನುಚ್ಚು ಅಕ್ಕಿಯನ್ನು ಜಿಬೌಟಿಗೆ ಮತ್ತು 50,000 ಟನ್ ಗಿನಿ ಬಿಸ್ಸೌಗೆ ರಫ್ತು ಮಾಡಲು ಅನುಮತಿಸಲಾಗಿದೆ.

ಭಾರತವು ಈ ಹಿಂದೆ ನೇಪಾಳ, ಕ್ಯಾಮರೂನ್, ಕೋಟ್ ಡಿ ಐವೊರ್, ಗಿನಿಯಾ, ಮಲೇಷ್ಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್‍ನಂತಹ ದೇಶಗಳಿಗೆ ಈ ರಫ್ತುಗಳನ್ನು ಅನುಮತಿಸಲಾಗಿದೆ. ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಬಹು-ರಾಜ್ಯ ಸಹಕಾರ ಸಂಘವಾಗಿದೆ. ಇದನ್ನು ದೇಶದ ಕೆಲವು ಪ್ರಮುಖ ಸಹಕಾರ ಸಂಘಗಳು ಜಂಟಿಯಾಗಿ ಪ್ರಚಾರ ಮಾಡುತ್ತವೆ, ಅಂದರೆ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಎಂದು ಜನಪ್ರಿಯವಾಗಿ ಅಮುಲ್ ಎಂದು ಕರೆಯಲಾಗುತ್ತದೆ, ಇಂಡಿಯನ್ ಫಾರ್ಮರ್ಸ್ ಫಾರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ , ಕೃಶಕ್ ಭಾರತಿ ಸಹಕಾರಿ ಲಿಮಿಟೆಡ್ ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರ್ಕೆಟಿಂಗ್ ಆಫ ಇಂಡಿಯಾ ಲಿಮಿಟೆಡ್ ಇದರಲಿದೆ.

RELATED ARTICLES

Latest News