ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ

ಬೆಂಗಳೂರು, ಫೆ.17-ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾ ಅಂಕಣವನ್ನು ನರೇಗಾ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ವಿಧಾನಸಭೆಯಲ್ಲಿಂದ 2023-24ನೇ ಸಾಲಿನ ಮುಂಗಡಪತ್ರ ಮಂಡಿಸಿದ ಅವರು, ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳಾದ ಖೋ-ಖೋ, ಕುಸ್ತಿ, ಕಬಡ್ಡಿ, ಕಂಬಳ, ಎತ್ತಿನಗಾಡಿ ಓಟ ಮುಂತಾದವುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಲು ಮತ್ತು ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು ಎಂದರು. ಖೈದಿಗಳಿಗೂ ಬಜೆಟ್‍ನಲ್ಲಿ ಗುಡ್ ನ್ಯೂಸ್ […]

ಬೃಹತ್ ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಗ್ರಾ.ಪಂ. ನೌಕರರ ಸಂಘ

ಬೆಂಗಳೂರು,ಫೆ.6- ಕೆಲ ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಯುತ್ತಿದ್ದು ಅದಕ್ಕೆ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇಂದಿನಿಂದ ನಮ್ಮ ಬೇಡಿಕೆಗಳು ಈಡೇರುವವರಿಗೂ ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಕೆಲಸಕ್ಕೆ ಹಾಜರಾಗದೆ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ ಡಿ ಪಿ ಆರ್ ಇಂದು ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ ಬೊಲ್ಮಾ, ಗ್ರಾಮೀಣಾಭಿವೃದ್ಧಿ […]

ವಿವಿಧ ಗ್ರಾಮ ಪಂಚಾಯ್ತಿಗಳ 262 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆ

ಬೆಂಗಳೂರು,ಫೆ.2- ರಾಜ್ಯದ ವಿವಿಧ ಗ್ರಾಮ ಪಂಚಾಯ್ತಿಗಳ 262 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಏಪ್ರಿಲ್ ತಿಂಗಳವರೆಗೆ ಅವ ಮುಕ್ತಾಯವಾಗುವ ಎಂಟು ಗ್ರಾಮ ಪಂಚಾಯ್ತಿಗಳ 127 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ 30 ಜಿಲ್ಲೆಗಳ 103 ಗ್ರಾಪಂಗಳ 135 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದೆ. ಒಟ್ಟು 262 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಆಯಾ ಜಿಲ್ಲಾಧಿಕಾರಿಗಳು ಫೆ.8ರಂದು ಚುನಾವಣಾ ಅಧಿಸೂಚನೆ […]

ಪಂಚಾಯ್ತಿ ಅಧಿಕಾರ ಕಡಿತಗೊಳಿಸಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು, ಅ.11- ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಸ್ತುತ ಇರುವ ಯಾವುದೇ ಅಧಿಕಾರವನ್ನು ಕಡಿತಗೊಳಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನು ಭೇಟಿಯಾಗಿ, ಅಧಿಕಾರವನ್ನು ಕಡಿತಗೊಳಿಸುವ ವಿಚಾರದ ಪ್ರಸ್ತಾವನೆ ವಿರುದ್ಧ ಪಂಚಾಯತ್ ಜನಪ್ರತಿನಿಧಿಗಳ ಆತಂಕವನ್ನು ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಯವರು, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ […]

ಗ್ರಾ.ಪಂ ಕಚೇರಿಯಲ್ಲಿ ಜಿಲೇಟಿನ್ ಸ್ಪೋಟಿಸಿ ದಾಖಲೆಗಳ ನಾಶಕ್ಕೆ ಯತ್ನ

ತುಮಕೂರು: ಗ್ರಾಮ ಪಂಚಾಯತಿ ಕಚೇರಿಯಲ್ಲಿ ಜಿಲೇಟಿನ್ ಸ್ಫೋಟವಾಗಿ ಕಚೇರಿ ಬಿರುಕು ಬಿಟ್ಟಿರುವ ಘಟನೆ ಪಾವಗಡ ತಾಲ್ಲೂಕಿನ ಬೂದಿಬೆಟ್ಟದಲ್ಲಿ ನಡೆದಿದೆ.  ಪಾವಗಡ ತಾಲ್ಲೂಕು ಗಡಿ ಭಾಗವಾದ ವೈಎನ್ ಹೊಸಕೋಟೆ ಸಮೀಪದ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಸ್ಫೋಟ ನಡೆಸಿದ್ದಾರೆ. ಕಚೇರಿಯ ಹಿಂಭಾಗದ ಕಿಟಕಿಯನ್ನು ಕಿತ್ತು ಒಳ ನುಗ್ಗಿರುವ ದುಷ್ಕರ್ಮಿಗಳು ಸಭಾಂಗಣದ ಮೂಲೆಯಲ್ಲಿ ಇಳಿಸಿರುವ ದಾಖಲೆಗಳ ಅಲೆಮಾರಿಗೆ ಹೊಂದಿಕೊಂಡಂತೆ ಇರುವ ಕುರ್ಚಿಯ ಮೇಲೆ ಸ್ಫೋಟಕ ಇಟ್ಟಿದ್ದು, ಸ್ಫೋಟದಿಂದ ಕಟ್ಟಡದ ಗೋಡೆಗಳು ಬಿರುಕು […]