Monday, December 2, 2024
Homeರಾಷ್ಟ್ರೀಯ | National5 ಕೋಟಿ ರೂ. ನೀಡುವಂತೆ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಕ್ಷಮೆಯಾಚನೆ

5 ಕೋಟಿ ರೂ. ನೀಡುವಂತೆ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಕ್ಷಮೆಯಾಚನೆ

Bishnoi-community-demands-apology-from-Salman-khan

ಮುಂಬೈ, ಅ. 22 (ಪಿಟಿಐ)- ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿ ಮೊಬೈಲ್ ಸಂದೇಶದ ಮೂಲಕ ಕ್ಷಮೆ ಕೊರಿದ್ದಾನೆ.

ಮುಂಬೈ ಸಂಚಾರ ಪೊಲೀಸರಿಗೆ ಕೆಲ ದಿನಗಳ ಹಿಂದೆ ಮೊಬೈಲ್ ಫೋನ್ ಮೂಲಕ ಸಲಾನ್ಖಾನ್ನಿಂದ ಐದು ಕೋಟಿ ಹಫ್ತಾ ಕೊಡಿಸುವಂತೆ ಧಮಕಿ ಹಾಕಿದ್ದ ವ್ಯಕ್ತಿ ಇದೀಗ ಅದೇ ಫೋನ್ನಿಂದ ಕ್ಷಮೆ ಕೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಲು ಬಳಸಿದ ಅದೇ ಮೊಬೈಲ್ ಸಂಖ್ಯೆಯಿಂದ ಕ್ಷಮೆಯಾಚನೆ ಯನ್ನು ಕಳುಹಿಸಿರುವುದು ತನಿಖೆಯ ವೇಳೆ ದೃಢಪಟ್ಟಿದೆ ಎಂದರು.

ನನ್ನ ಬೆದರಿಕೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಆರೋಪಿ ಹೇಳಿಕೆ ನೀಡಿದ್ದರಿಂದ ವರ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಬೆದರಿಕೆ ಮತ್ತು ಸುಲಿಗೆಗಾಗಿ ಪ್ರಕರಣ ದಾಖಲಿಸಲಾಗಿತ್ತು.

ಸೂಪರ್ ಸ್ಟಾರ್ಗೆ ಈ ಹಿಂದೆ ಲಾರೆನ್‌ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆಗಳು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ್ದರು.

RELATED ARTICLES

Latest News