Thursday, December 5, 2024
Homeರಾಷ್ಟ್ರೀಯ | Nationalಸನಾತನ ಧರ್ಮ ನಿರ್ಮೂಲನೆ ಹೇಳಿಕೆ : ಕ್ಷಮೆಯಾಚಿಸಲ್ಲ ಎಂದ ಉದಯನಿಧಿ ಸ್ಟಾಲಿನ್

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ : ಕ್ಷಮೆಯಾಚಿಸಲ್ಲ ಎಂದ ಉದಯನಿಧಿ ಸ್ಟಾಲಿನ್

Udhayanidhi Stalin refuses to apologise for his 'Sanatana Dharma' remark

ಚನ್ನೈ,ಅ.22- ಸನಾತನ ಧರ್ಮದ ನಿರ್ಮೂಲನೆಯನ್ನು ಪ್ರತಿಪಾದಿಸುವ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆ ಯಾಚಿಸುವುದಿಲ್ಲ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪ್ರತಿಪಾದಿಸಿದ್ದಾರೆ.

ಟೀಕೆಗಳು ಮಹಿಳೆಯರ ಮೇಲಿನ ದಮನಕಾರಿ ಗುರಿಯನ್ನು ಹೊಂದಿವೆ. ಡಿಎಂಕೆ ನಾಯಕರು ತನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ತಾವು ನೀಡಿರುವ ಹೇಳಿಕೆಗಳು ದ್ರಾವಿಡ ನಾಯಕರಾದ ಪೆರಿಯಾರ್, ಮಾಜಿ ಮುಖ್ಯಮಂತ್ರಿ ಸಿ.ಎನ್ .ಅಣ್ಣಾದೊರೈ ಮತ್ತು ಎಂ.ಕರುಣಾನಿಧಿ ಅವರ ಅಭಿಪ್ರಾಯಗಳನ್ನು ಪ್ರತಿಧ್ವನಿಸಿವೆ ಎಂದು ಸಮರ್ಥನೆ ಮಾಡಿಕೊಂಡರು.

ಆಗ ಮಹಿಳೆಯರಿಗೆ ಅಧ್ಯಯನ ಮಾಡಲು ಅವಕಾಶವಿರಲಿಲ್ಲ. ಅವರು ತಮ ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ, ಅವರ ಗಂಡ ಸತ್ತರೆ, ಅವರೂ ಸಾಯಬೇಕಾಗಿತ್ತು. ತಂತೈ ಪೆರಿಯಾರ್ ಈ ಎಲ್ಲದರ ವಿರುದ್ಧ ಮಾತನಾಡಿದರು. ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಹೇಳಿದ್ದನ್ನು ನಾನು ಪ್ರತಿಧ್ವನಿಸಿದ್ದೇನೆ ಎಂದು ಉದಯನಿಧಿ ಹೇಳಿದ್ದಾರೆ.

ಸೆಪ್ಟೆಂಬರ್ 2023 ರಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ .ಸ್ಟಾಲಿನ್ ಅವರ ಪುತ್ರ ಉದಯನಿಧಿ ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಕ್ಕೆ ಹೋಲಿಸಿದ ನಂತರ ಭಾರೀ ವಿವಾದ ಉಂಟಾಗಿತ್ತು. ತಮ ಹೇಳಿಕೆಯನ್ನು ವಿರೋಧಿಸಬಾರದು. ಆದರೆ ನಿರ್ಮೂಲನೆ ಆಗಲೇಬೇಕು ಎಂದು ಕರೆಕೊಟ್ಟಿದ್ದರು.

ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಅವರು ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ವಾದಿಸಿದರು. ಈ ಟೀಕೆಗಳು ವಿಶೇಷವಾಗಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ತೀವ್ರ ಟೀಕೆ ಮತ್ತು ಪ್ರತಿಭಟನೆಗೆ ಕಾರಣವಾಯಿತು. ಇದರ ಪರಿಣಾಮವಾಗಿ ಅವರ ವಿರುದ್ಧ ಅನೇಕ ಕಾನೂನು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಆದರೆ ನನ್ನ ಮಾತುಗಳನ್ನು ತಿರುಚಲಾಗಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಲವಾರು ನ್ಯಾಯಾಲಯಗಳಲ್ಲಿ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅವರು ನನ್ನನ್ನು ಕ್ಷಮೆ ಯಾಚಿಸುವಂತೆ ಕೇಳಿದರು. ಆದರೆ ನಾನು ಏನು ಹೇಳಿದ್ದೇನೋ ಅದಕ್ಕೆ ಈಗಲೂ ಬದ್ದವಾಗಿದ್ದೇನೆ. ಅದರ ಪರವಾಗಿ ನಾನು ನಿಲ್ಲುತ್ತೇನೆ. ನಾನು ಕಲೈಂಜರ್ ಅವರ ಮೊಮಗ, ಮತ್ತು ನಾನು ಕ್ಷಮೆ ಯಾಚಿಸುವುದಿಲ್ಲ.

ನನ್ನ ಮೇಲಿರುವ ಎಲ್ಲಾ ಪ್ರಕರಣಗಳನ್ನು ಎದುರಿಸುವುದಾಗಿ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಹಿಂದಿಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ತಮಿಳುನಾಡು ಗೀತೆಗೆ ಇತ್ತೀಚಿನ ಬದಲಾವಣೆಗಳು ಈ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಪ್ರತಿಪಾದಿಸಿದರು. ಇತ್ತೀಚೆಗೆ ದೂರದರ್ಶನ ತಮಿಳು ಕಾರ್ಯಕ್ರಮವೊಂದರಲ್ಲಿ ಉದ್ದೇಶಪೂರ್ವಕವಾಗಿ ರಾಜ್ಯಗೀತೆಯಿಂದ ಕೆಲವು ಪದಗಳನ್ನು ತೆಗೆದು ಹಾಕಲಾಗಿದೆ ಎಂದು ಅವರು ಆರೋಪ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

RELATED ARTICLES

Latest News