Monday, December 2, 2024
Homeಬೆಂಗಳೂರುದೀಪಾವಳಿಗೆ ಟಿಕೆಟ್ ದರ ಭಾರಿ ಏರಿಕೆ : ಖಾಸಗಿ ಬಸ್ ಮಾಲೀಕರಿಂದ ರಾಜಾರೋಷವಾಗಿ ಸುಲಿಗೆ

ದೀಪಾವಳಿಗೆ ಟಿಕೆಟ್ ದರ ಭಾರಿ ಏರಿಕೆ : ಖಾಸಗಿ ಬಸ್ ಮಾಲೀಕರಿಂದ ರಾಜಾರೋಷವಾಗಿ ಸುಲಿಗೆ

Huge increase in Ticket Fare for Diwali: Extortion by private bus owners

ಬೆಂಗಳೂರು,ಅ.22- ದೀಪಾವಳಿ ಹಬ್ಬಕ್ಕೆ ತಮ ಊರಿಗೆ ತೆರಳಲು ಮುಂದಾಗಿದ್ದ ಜನರಿಗೆ ಕೆಲ ಖಾಸಗಿ ಬಸ್ ಕಂಪನಿಗಳು ಏಕಾಏಕಿ ಟಿಕೆಟ್ ದರ ಹೆಚ್ಚಿಸಿ ಶಾಕ್ ನೀಡಿದೆ.ಹಬ್ಬದ ಹಿಂದಿನ ದಿನ ಖಾಸಗಿ ಬಸ್ಗಳ ಸೀಟ್ಗಳೆಲ್ಲಾ ಬಹುತೇಕ ಬುಕ್ ಆಗಿದ್ದು ಕೆಲ ಬಸಿನಲ್ಲಿ ಮಾತ್ರ ಸೀಟುಗಳಿದ್ಧು ಇದರ ಲಾಭ ಪಡೆಯಲು ದರ ಹೆಚ್ಚಳ ಮಾಡಲಾಗುತ್ತಿದೆ.

ಇದನ್ನ ಮನಗೊಂಡ ಸಾರಿಗೆ ಇಲಾಖೆ ಖಾಸಗಿ ಸಾರಿಗೆ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ, 2 ಶನಿವಾರ ಹಾಗೂ 3 ರಂದು ಭಾನುವಾರ ಮೂರು ದಿನ ಹಬ್ಬ ಹಾಗೂ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಊರುಗಳತ್ತ ಮುಖ ಮಾಡಿದ್ದಾರೆ.

ಪ್ರಯಾಣಿಕರ ಬೇಡಿಕೆ ಬರುವ ಸಾಧ್ಯತೆ ಇರುವುದರಿಂದ ಖಾಸಗಿ ಬಸ್ಗಳು ಹಬ್ಬ ಸಮೀಪದ ದಿನಗಳಲ್ಲಿ ಟಿಕೆಟ್ ದರ ದುಪ್ಪಟ್ಟು ಮಾಡುವ ಸಾಧ್ಯತೆ ಇದ್ದು, ಹೀಗಾಗಿ ಖಾಸಗಿ ಬಸ್ಗಳಿಗೆ ಸಾರಿಗೆ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಇಂದಿನಿಂದಲೇ ಹಬ್ಬದವರೆಗೂ ವಿಶೇಷ ತನಿಖಾ ತಂಡಗಳನ್ನು ರಚಿಸಿ, ರಾಜ್ಯಾದ್ಯಂತ ಬಸ್ಗಳ ತಪಾಸಣೆ ನಡೆಸಲಿದೆ. ಜೊತೆಗೆ ದರ ಏರಿಕೆ ಮಾಡಿದ ಬಸ್ಗಳ ನೋಂದಣಿ ಅಮಾನತು ಮಾಡಲು ಮುಂದಾಗಿದೆ ಎಂದು ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

RELATED ARTICLES

Latest News