ಬಿಹಾರದಲ್ಲಿ ಬಂದೂಕುಧಾರಿಗಳ ಅಟ್ಟಹಾಸ, ಒಬ್ಬ ಸಾವು, 11 ಮಂದಿ ಗಾಯ

ಬೇಗುಸರಾಯ್, ಸೆ 14 -ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಜನನಿಬಿಡ ಪ್ರದೇಶದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ಸಾವನ್ನಪ್ಪಿ 11 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೇಯಲ್ಲಿ ನಡೆದಿದೆ. ಬೇಗುಸರೈ ಪಟ್ಟಣದ ಮಲ್ಹಿಪುರ್‍ಚೌಕದಲ್ಲಿ ಈ ಘಟನೆ ನಡೆದಿದ್ದು, ಬಂದೂಕುಧಾರಿಗಳು ಅಂಗಡಿಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ, ಭಯಭೀತರಾದ ಜನರು ಪ್ರಾಣಾಪಾಯದಿಂದ ಸುರಷಿತ ಸ್ಥಳಕ್ಕೆ ಒಡಿದ್ದಾರೆ ಆದರೆ ಅಂಗಡಿಗಳ ಮಾಲೀಕರು ಬಚಿಟ್ಟುಕೊಂಡು ಜೀವ ಉಳಿಸಿಕೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಚಂದನ್ ಕುರ್ಮಾ ಎಂಬ […]