ಅಬುಜಾ, ಫೆ.15 – ನೈಜೀರಿಯಾದ ಉತ್ತರ ಪ್ರದೇಶದಲ್ಲಿ ಬಂದೂಕುಧಾರಿಗಳು ಏಕಕಾಲದಲ್ಲಿ ಸಮುದಾಯಗಳ ಮೇಲೆ ದಾಳಿ ನಡೆಸಿ 32 ಜನರನ್ನು ಕೊಂದುಹಾಕಿದ್ದಾರೆ. ನೈಜರ್ ರಾಜ್ಯದ ಬೋಗುರ್ ಪ್ರದೇಶದಲ್ಲಿ ತುಂಗಾಮಕೇರಿ, ಕೊಂಕೋಸೊ ಮತ್ತು ಪಿಸ್ಸಾ ಸಮುದಾಯಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಲಾಗಿದೆ.
ಬಂದೂಕುಧಾರಿಗಳು ಹಲವು ಜನರನ್ನು ಅಪಹರಿಸಿದ್ದಾರೆ ಎಂದು ನೈಜರ್ ರಾಜ್ಯ ಪೊಲೀಸ್ ವಕ್ತಾರ ವಾಸಿಯು ಅಬಿಯೋಡನ್ ಹೇಳಿದ್ದಾರೆ. ಭದ್ರತಾ ತಂಡಗಳನ್ನು ಸ್ಥಳಕ್ಕೆ ದಾವಿಸಿದ್ದು ಜನರ ರಕ್ಷಿಸುವ ಪ್ರಯತ್ನ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಕೊಂಕೋಸೊ ನಿವಾಸಿ ಅಬ್ದುಲ್ಲಾಹಿ ಅದಾಮು ಅವರು ತಮ್ಮ ಸಮುದಾಯದ ಮೇಲಿನ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಇಸ್ಲಾಮಿಕ್ ಉಗ್ರಗಾಮಿಗಳು ಮತ್ತು ಸಶಸ್ತ್ರ ಗ್ಯಾಂಗ್‌ಗಳು ಸುಲಿಗೆಗಾಗಿ ಜನರನ್ನು ಅಪಹರಿಸುತ್ತಿರುವ,ಸುಲಿಗೆ ಮಾಡುವ ಘಟನೆ ಉತ್ತರ ನೈಜೀರಿಯಾ ದಲ್ಲಿ ಆಗಾಗ ನಡೆಯುತ್ತದೆ ಈ ತಿಂಗಳ ಆರಂಭದಲ್ಲಿ ನೆರೆಯ ಕ್ವಾರಾ ರಾಜ್ಯದಲ್ಲಿ ನಡೆದ ಮಾರಕ ದಾಳಿಯ 162 ಜನರು ಸಾವನ್ನಪ್ಪಿದರು.
