ಕೊಲಂಬೋ,ಫೆ.15- ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ-20 ವಿಶ್ವಕಪ್ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ಇಡೀ ಕ್ರೀಡಾ ಜಗತ್ತು ಈ ಪಂದ್ಯ ವೀಕ್ಷಿಸಲು ಕಾತುರವಾಗಿದೆ. ಈಗಾಗಲೇ ವಿಶ್ವಕಪ್ ವೇದಿಕೆಯಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ದಾಖಲೆ ಹೊಂದಿರುವ ಭಾರತ ಗೆಲುವಿನ ಓಟವನ್ನು ಮುಂದುವರಿಸಲು ಸಜ್ಜಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಯುವ ಪಡೆ ತಮ ಶಕ್ತಿ ಸಾಮರ್ಥ್ಯವನ್ನು ಪಣಕ್ಕಿಟ್ಟಿದೆ. ಪಾಕಿಸ್ತಾನದಲ್ಲೂ ಕೂಡ ಹೊಸ ಸಾರಥ್ಯ ಮತ್ತು ಸಮಿಶ್ರ ಆಟಗಾರರು ಕಾಣಿಸಿಕೊಂಡಿದ್ದಾರೆ. ಹಲವಾರು ನಾಟಕೀಯ ಸನ್ನಿವೇಶಗಳ ನಂತರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿದ ನಂತರ ಈ ಪಂದ್ಯ ಭಾರಿ ಮಹತ್ವ ಪಡೆದಿದೆ.
ಹುಟ್ಟಿ ನೋವಿನಿಂದ ಬಳಲಿದ್ದ ಆರಂಭಿಕ ಬ್ಯಾಟ್ಸ್ ಮ್ಯಾನ್ ಅಭಿಷೇಕ್ ಶರ್ಮ ಅಂಕಣಕ್ಕೆ ಎಳೆಯುವುದು ಬಹುತೇಕ ನಿಶ್ಚಿತವಾಗಿದ್ದು, ಇನ್ನು ಬೋಲಿಂಗ್ ವಿಭಾಗದಲ್ಲಿ ಭೂಮ್ರ ಮತ್ತು ಸಿರಾಜ್ ಕಾಣಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಹಿಂದಿನ ಅಮೆರಿಕ ಮತ್ತು ನಮಿಬಿಯ ವಿರುದ್ಧ ಪಂದ್ಯಗಳಲ್ಲಿ ನಡೆದಂತಹ ಎಡವಟ್ಟುಗಳು ಈ ಪಂದ್ಯದಲ್ಲಿ ಮರುಕಳಿಸದಿರಲು ಕೋಚ್ ಗೌತಮ್ ಗಂಭೀರ್ ಕಠಿಣ ತರಬೇತಿ ನೀಡಿದ್ದಾರೆ. ಪ್ರೇಮದಾಸ ಕ್ರೀಡಾಂಗಣ ಬೌಲರ್‌ಗಳಿಗೆ ಪ್ರಯೋಜನವಾಗಲಿದೆ ಆದರೂ ಬ್ಯಾತ್ಸ್ ಮ್ಯಾನ್‌ಗಳಿಗೂ ಸಹಕಾರಿಯಾಗಿದೆ ಕ್ರಿಕೆಟ್ ಪಂಡಿತರು ಅಂದಾಜಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬೋಲಿಂಗ್ ಮಾಡಿ ನಂತರ ಮೊತ್ತವನ್ನು ಬೆನ್ನಟ್ಟುವುದು ಮೊದಲ ಆದ್ಯತೆಯಾಗಿದ್ದು ಆದರೆ ಅದೃಷ್ಟ ಯಾರ ಪಾಲಿಗೆ ಎಂಬುದು ನೋಡಬೇಕಿದೆ. ಸುಮಾರು 40 ಸಾವಿರ ಪ್ರೇಕ್ಷಕರು ಕೂರುವ ವ್ಯವಸ್ಥೆ ಹೊಂದಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಈಗಾಗಲೇ ಟಿಕೆಟ್ ಗಳು ಸೋಲ್‌್ಡ ಔಟ್ ಆಗಿದೆ. ಇಂದು ಮಹಾಶಿವರಾತ್ರಿಯ ಆಗಿರುವುದರಿಂದ ಭಾರತ ತಂಡ ಗೆಲುವು ಸಾಧಿಸಲು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
