ಕಳ್ಳನ ಮೇಲೆ ಗುಂಡು ಹಾರಿಸಿದ ಮನೆ ಮಾಲೀಕ

ಬೆಂಗಳೂರು, ಡಿ.13- ಮನೆಗಳ್ಳತನ ಮಾಡಲು ಬಂದಿದ್ದ ಕಳ್ಳ ಮನೆ ಮಾಲೀಕ ಬಂದೂಕಿನಿಂದ ಹಾರಿಸಿದ ಗುಂಡಿನಿಂದ ಗಾಯಗೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಆರೋಪಿ ಲಕ್ಷ್ಮಣ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಚೇನಹಳ್ಳಿಯ ನಿವಾಸಿ ವೆಂಕಟೇಶ್ ಎಂಬುವವರ ಮನೆಗೆ ಮುಂಜಾನೆ 2 ಗಂಟೆ ಸುಮಾರಿನಲ್ಲಿಕಳ್ಳತನ ಮಾಡಲು ಆರೋಪಿ ಲಕ್ಷ್ಮಣ ಬಂದಿದ್ದಾನೆ. ಶಬ್ಧದಿಂದ ಎಚ್ಚರಗೊಂಡ ವೆಂಕಟೇಶ್ ಅವರು ಮನೆಗೆ ಕಳ್ಳ ನುಗ್ಗಿದ್ದಾನೆಂದು ತಿಳಿದು, ತಕ್ಷಣ ತಮ್ಮ ಡಬಲ್ ಬ್ಯಾರೆಲ್ ಗನ್ ತೆಗೆದುಕೊಂಡು ಒಂದು ಸುತ್ತು ಗುಂಡು […]