Saturday, July 27, 2024
Homeಬೆಂಗಳೂರುನಿಯಮ ಮೀರಿ ವಿದೇಶಿಗರಿಗೆ ಬಾಡಿಗೆಗೆ ಮನೆ ನೀಡಿದ್ದ ಮಾಲೀಕರ ವಿರುದ್ಧ ಕ್ರಮ

ನಿಯಮ ಮೀರಿ ವಿದೇಶಿಗರಿಗೆ ಬಾಡಿಗೆಗೆ ಮನೆ ನೀಡಿದ್ದ ಮಾಲೀಕರ ವಿರುದ್ಧ ಕ್ರಮ

ಬೆಂಗಳೂರು,ಜೂ.11- ವಿದೇಶಿ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಪ್ರಜೆಗಳನ್ನು ಮನೆ ಬಾಡಿಗೆಗೆ ನೀಡಿದ್ದ 20 ಮಂದಿ ಮನೆ ಮಾಲೀಕರ ವಿರುದ್ಧ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ತಂಡ, ನಗರದ ಬಾಣಸವಾಡಿ, ರಾಮಮೂರ್ತಿನಗರ, ಕೆ.ಆರ್‌.ಪುರ, ಸೋಲದೇವನಹಳ್ಳಿ, ಬಾಗಲಕುಂಟೆ, ಕಾಡುಗೋಡಿ, ಬೇಗೂರು, ಬೊಮನಹಳ್ಳಿ, ಪರಪ್ಪನ ಅಗ್ರಹಾರ, ವಿದ್ಯಾರಣ್ಯಪುರ ಮತ್ತು ಚಿಕ್ಕಜಾಲ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು.

ಆ ಸಂದರ್ಭದಲ್ಲಿ ವಿದೇಶಿಯರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ವಿದೇಶಿ ಪ್ರಜೆಗಳಿಗೆ(ಡ್ರಗ್‌ ಪೆಡ್ಲರ್‌) ಮನೆಗಳನ್ನು ಬಾಡಿಗೆಗೆ ನೀಡಿದ್ದ ಮಾಲೀಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಮನೆ ಮಾಲೀಕ ಯಾವುದೇ ವಿದೇಶಿ ಪ್ರಜೆಗಳಿಗೆ ತನ್ನ ಮನೆಯನ್ನು ಬಾಡಿಗೆಗೆ ನೀಡಿದ 24 ಗಂಟೆಯೊಳಗೆ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್‌ ಪೋರ್ಟಲ್‌ ಮೂಲಕ ತಪ್ಪದೇ ನಮೂನೆಯನ್ನು ಅಧಿಕಾರಿಗಳಿಗೆ ಸಲ್ಲಿಸಬೇಕಿರುತ್ತದೆ.

ಈ ನಿಯಮಗಳನ್ನು ಪಾಲಿಸದೆ 2023-24ನೇ ಸಾಲಿನಲ್ಲಿ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆ ನೀಡಿರುವ ಬಗ್ಗೆ ತಿಳಿದುಬಂದಿದ್ದು, ಈ ಮನೆಗಳನ್ನು ಬಾಡಿಗೆಗೆ ಪಡೆದಿದ್ದ ವಿದೇಶಿ ಪ್ರಜೆಗಳ ಪೈಕಿ ಅನೇಕರು ಡ್ರಗ್‌ ಪೆಡ್ಲಿಂಗ್‌ನಂತಹ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಿರುವುದು ಕಂಡುಬಂದ ಹಿನ್ನಲೆಯಲ್ಲಿ ಅಂತಹ ವಿದೇಶಿಯರ ವಿರುದ್ದ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

RELATED ARTICLES

Latest News