Monday, June 17, 2024
Homeರಾಜ್ಯಪ್ರಮಾಣವಚನ ಸ್ವೀಕರಿಸಿದ ಸುರಪುರ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ

ಪ್ರಮಾಣವಚನ ಸ್ವೀಕರಿಸಿದ ಸುರಪುರ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ

ಬೆಂಗಳೂರು,ಜೂ.11– ಸುರಪುರ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದ ರಾಜಾ ವೇಣುಗೋಪಾಲ ನಾಯಕ ಅವರು ಇಂದು ವಿಧಾನಸಭೆ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್‌ ಫರೀದ್‌ ಅವರು ಪ್ರಮಾಣವಚನ ಬೋಧಿಸಿದರು. ವಿಧಾನಸಭಾ ಸದಸ್ಯರಾಗಿ ದೇವರ ಹೆಸರಿನಲ್ಲಿ ಅಧಿಕಾರ ಹಾಗೂ ಗೌಪ್ಯತಾ ಪ್ರಮಾಣವಚನವನ್ನು ವೇಣುಗೋಪಾಲ ನಾಯಕ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಭಾಧ್ಯಕ್ಷ ಖಾದರ್‌, ಸಚಿವ ಶರಣಬಸಪ್ಪ ದರ್ಶನಪುರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಅಭಿನಂದಿಸಿದರು. ಈ ವೇಳೆ ಶಾಸಕರಾದ ಬಿ.ಚಿಮನಕಟ್ಟಿ, ಅಲ್ಲಮಪ್ರಭು ಪಾಟೀಲ್‌, ಜಗದೇವ ಗುತ್ತೇದಾರ್‌, ಸಂಸದ ಕುಮಾರ್‌ ನಾಯಕ್‌, ವಿಧಾನಸಭೆ ಕಾರ್ಯದರ್ಶಿ ಎನ್‌.ಕೆ.ವಿಶಾಲಾಕ್ಷಿ ಮತ್ತಿತರರು ಇದ್ದರು.

ಕಾಂಗ್ರೆಸ್‌‍ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಕಳೆದ ಫೆಬ್ರವರಿ 25ರಂದು ನಿಧನರಾಗಿದ್ದರು. ಅವರ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಲೋಕಸಭೆ ಎರಡನೇ ಹಂತದ ಚುನಾವಣೆ ಸಂದರ್ಭದಲ್ಲೇ ಉಪಚುನಾವಣೆ ನಡೆದಿತ್ತು.
ಉಪಚುನಾವಣೆಯಲ್ಲಿ ವೇಣುಗೋಪಾಲ್‌ ನಾಯಕ್‌ ಅವರು ಚುನಾಯಿತರಾಗಿದ್ದರು.

RELATED ARTICLES

Latest News