ಉಕ್ರೇನ್‍ನಲ್ಲಿ ಭಾರತೀಯರನ್ನು ಕಾಪಾಡಿದ ತ್ರಿವರ್ಣ ಧ್ವಜ

ದಾವಣಗೆರೆ, ಫೆ.2- ಭಾರತದ ತ್ರಿವರ್ಣ ಧ್ವಜ ಕಂಡರೆ ಉಕ್ರೇನ್ ಹಾಗೂ ರಷ್ಯಾದವರು ತುಂಬಾನೇ ಗೌರವ ಕೊಡುತ್ತಿದ್ದರು. ಯಾವುದೇ ಸಮಸ್ಯೆ ಮಾಡುತ್ತಿರಲಿಲ್ಲ. ಬದಲಿಗೆ ನಿಮಗೇನೂ ಮಾಡುವುದಿಲ್ಲ, ಆತಂಕಕ್ಕೆ ಒಳಗಾಗಬೇಡಿ ಎಂಬುದಾಗಿ ಧೈರ್ಯ ತುಂಬುತ್ತಿದ್ದರು. ಇದು ಉಕ್ರೇನ್‍ನಲ್ಲಿ ಸಂಕಷ್ಟಕ್ಕೊಳಗಾಗಿ ಸುರಕ್ಷಿತವಾಗಿ ದಾವಣಗೆರೆಗೆ ಮರಳಿರುವ ಮಹ್ಮದ್ ಹಬೀಬ್ ಅಲಿ ಎಂಬ ವಿದ್ಯಾರ್ಥಿ ಅಲ್ಲಿನ ಪರಿಸ್ಥಿತಿ ಬಗ್ಗೆ ಹಂಚಿಕೊಂಡಿರುವ ಮನದಾಳದ ಮಾತು. ದಾವಣಗೆರೆಯ ಭಗತ್ ಸಿಂಗ್ ನಗರ ವಾಸಿ ಹಬೀಬ್ ಅಲಿ, ಉಕ್ರೇನ್‍ನ ಚರ್ನಿವಿಸ್ತಿಯಲ್ಲಿ ಎಂಬಿಬಿಎಸ್ ಓದುತ್ತಿದ್ದರು. ಕಳೆದ ಡಿಸೆಂಬರ್‍ನಲ್ಲಿ ಉಕ್ರೇನ್‍ಗೆ ತೆರಳಿದ್ದ […]