ದುರ್ಗಾ ಮಾತೆ ಪ್ರತಿಮೆ ವಿಸರ್ಜನೆ ವೇಳೆ ನದಿಯಲ್ಲಿ ಹಠಾತ್ ಪ್ರವಾಹ, 8 ಮಂದಿ ಜಲಸಮಾಧಿ
ಜಲ್ಪರ್‍ಗುರಿ, ಅ.6 -ಪಶ್ಚಿಮ ಬಂಗಾಳದಲ್ಲಿ ದುರ್ಗಾ ಮಾತೆ ಪ್ರತಿಮೆಗಳ ವಿಸರ್ಜನೆಯ ಸಂದರ್ಭದಲ್ಲಿ ಮಾಲ್ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ 8 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ಇಲ್ಲಿ ನಡೆದಿದೆ. ಮಜ್ಜನ ಸಮಾರಂಭದಲ್ಲಿ ಭಾಗವಹಿಸಲು ನೂರಾರು ಜನರು ಮಾಲ್ ನದಿಯ ದಡದಲ್ಲಿ ಜಮಾಯಿಸಿದ್ದರು ಇದ್ದಕ್ಕಿದ್ದಂತೆ, ಹಠಾತ್ ಪ್ರವಾಹ ಅಪ್ಪಳಿಸಿತು ಮತ್ತು ಜನರು ಕೊಚ್ಚಿಹೋದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಎಂಟು ಶವಗಳನ್ನು ಹೊರತೆಗೆಯಲಾಗಿದೆ ಅದರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ ಸುಮಾರು 50 […]