Friday, May 3, 2024
Homeರಾಷ್ಟ್ರೀಯಪಶ್ಚಿಮ ಬಂಗಾಳದಲ್ಲಿ ಚಂಡಮಾರುತಕ್ಕೆ ಐದು ಬಲಿ, ನೂರಾರು ಮಂದಿಗೆ ಗಾಯ

ಪಶ್ಚಿಮ ಬಂಗಾಳದಲ್ಲಿ ಚಂಡಮಾರುತಕ್ಕೆ ಐದು ಬಲಿ, ನೂರಾರು ಮಂದಿಗೆ ಗಾಯ

ಜಲ್ಪೈಗುರಿ, ಏ.1- (ಪಿಟಿಐ) : ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಕಾಣಿಸಿಕೊಂಡಿರುವ ವಿನಾಶಕಾರಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.ಜಿಲ್ಲಾ ಕೇಂದ್ರ ಪಟ್ಟಣದ ಬಹುತೇಕ ಭಾಗಗಳಲ್ಲಿ ಮತ್ತು ನೆರೆಯ ಮೈನಾಗೂರಿನ ಹಲವು ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಬಲವಾದ ಗಾಳಿ ಬೀಸಿದ್ದರಿಂದ ಹಲವಾರು ಗುಡಿಸಲುಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.

ಮರಗಳು ಬುಡಸಮೇತ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ತಡರಾತ್ರಿ ಜಿಲ್ಲೆಗೆ ದೌಡಾಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಿಲ್ಲಾಡಳಿತದಿಂದ ಎಲ್ಲ ನೆರವು ನೀಡುವುದಾಗಿ ಜನರಿಗೆ ಭರವಸೆ ನೀಡಿದರು.ಇದುವರೆಗೆ, ನಮ್ಮಲ್ಲಿ ಐದು ಜನರ ಸಾವಿನ ವರದಿಗಳಿವೆ.

ಗಾಯಗೊಂಡವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ನಾನು ಗಾಯಾಳುಗಳು ಮತ್ತು ಚಂಡಮಾರುತದಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಆಡಳಿತವು ಎಲ್ಲವನ್ನೂ ಮಾಡುತ್ತದೆ ಎಂದು ಅವರು ಹೇಳಿದರು.

ಇದು ದುರಂತ, ತುರ್ತು ಪರಿಸ್ಥಿತಿ. ಹತ್ಯೆಗೀಡಾದವರ ಕುಟುಂಬಗಳನ್ನು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅವರ ತ್ವರಿತ ಕ್ರಮಕ್ಕಾಗಿ ನಾನು ಆಡಳಿತಕ್ಕೆ ಧನ್ಯವಾದ ಹೇಳುತ್ತೇನೆ. ನಾವು ಜನರ ಜತೆಯಲ್ಲಿದ್ದೇವೆ ಮತ್ತು ಅವರ ಚಿಕಿತ್ಸೆಯನ್ನು ನೋಡಿಕೊಳ್ಳುತ್ತೇವೆ ಮತ್ತು ಮನೆಗಳನ್ನು ಮರುನಿರ್ಮಾಣ ಮಾಡುತ್ತೇವೆ, ಎಂದು ಬ್ಯಾನರ್ಜಿ ಹೇಳಿದರು.

ಬ್ಯಾನರ್ಜಿ ಅವರು ಟಿಎಂಸಿ ಪಕ್ಷದ ನಾಯಕರೊಂದಿಗೆ ಜಲ್ಪೈಗುರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತೆರಳಿದರು ಮತ್ತು ಅವರ ಮಾರ್ಗದಲ್ಲಿ ಇತರ ಜಿಲ್ಲೆಗಳ ಪರಿಹಾರ ಶಿಬಿರಗಳಲ್ಲಿ ವೀಡಿಯೊ ಕರೆ ಮೂಲಕ ಮಾತನಾಡಿದರು.

ರಾಜರಹತ್, ಬರ್ನಿಶ್, ಬಕಾಲಿ, ಜೋರ್ಪಾಕ್ಡಿ, ಮಧಬ್ದಂಗ ಮತ್ತು ಸಪ್ತಿಬರಿ, ಹಲವಾರು ಎಕರೆ ಕೃಷಿ ಭೂಮಿ ಮತ್ತು ಬೆಳೆ ಹಾನಿಯಾಗಿದೆ ಎಂದು ಅ„ಕಾರಿಗಳು ತಿಳಿಸಿದ್ದಾರೆ. ರಾಜ್ಯಪಾಲ ಸಿ ವಿ ಆನಂದ ಬೋಸ್ ಕೂಡ ಇಂದು ಮುಂಜಾನೆ ಬಂಗಾಳದ ಉತ್ತರ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಇದು ಅತ್ಯಂತ ದುರದೃಷ್ಟಕರ. ಚಂಡಮಾರುತದಲ್ಲಿ ಜೀವಹಾನಿಯಾಗಿದೆ. ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ನಾನು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡುತ್ತೇನೆ. ಎಲ್ಲವನ್ನೂ ಮಾಡಲಾಗುವುದು ಎಂದು ಬೋಸ್ ವಿಮಾನ ಹತ್ತುವ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತದಲ್ಲಿ ಸಂಭವಿಸಿದ ಜೀವಹಾನಿಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅ„ಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಅದರಿಂದ ಸಂತ್ರಸ್ತರಾದವರಿಗೆ ಸರಿಯಾದ ಸಹಾಯವನ್ನು ಖಚಿತಪಡಿಸಿಕೊಳ್ಳಲು ಅವರನ್ನು ಕೇಳಿದ್ದೇನೆ ಎಂದು ಹೇಳಿದರು.ವಿಪತ್ತು ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ ಮತ್ತು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಲ್ಪೈಗುರಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News