ಅರ್ಕಾವತಿ ಭೂ ಸ್ವಾದೀನ ವಿವಾದ : ಮೇಲ್ಮನೆಯಲ್ಲಿ ಕೋಲಾಹಲ

ಬೆಂಗಳೂರು,ಫೆ.21- ಸರ್ಕಾರ ಸ್ವಾದೀನ ಪಡಿಸಿದ ಭೂಮಿಗೆ ಖಾಸಗಿ ವ್ಯಕ್ತಿಗಳಿಗೆ ಪರಿಹಾರ ಪಾವತಿಸಿ ಅಕ್ರಮವೆಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ವಿಧಾನಪರಿಷತ್‍ನಲ್ಲಿಂದು ಕಾವೇರಿದ ಚರ್ಚೆ ನಡೆದು ಸಚಿವರು ಮತ್ತು ಸದಸ್ಯರ ನಡುವೆ ವಾಗ್ವಾದ, ಪ್ರತಿಪಕ್ಷಗಳ ಧರಣಿ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಮರಿತಿಬ್ಬೇಗೌಡ ಅವರ ಪ್ರಶ್ನಿಗೆ ಉತ್ತರ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರಿನ ಉತ್ತರ ತಾಲ್ಲೂಕಿನ ನಾಗಾವಾರ ಗ್ರಾಮದ ಸರ್ವೆ ನಂ.135/1ರಲ್ಲಿ 32ಗುಂಟೆ ವಿಸ್ತೀರ್ಣದ ಭೂಮಿ ಇದ್ದು, ಅರ್ಕಾವತಿ ಬಡಾವಣೆ ನಿರ್ಮಾಣ ಉದ್ದೇಶಕ್ಕಾಗಿ […]