ಮಾಂಸಾಹಾರ ವಿವಾದದಲ್ಲಿ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ
ಬೆಂಗಳೂರು,ಆ.24- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾಂಸಾಹಾರ ಸಂಬಂಧಪಟ್ಟಂತೆ ವಿವಾದ ಸೃಷ್ಟಿಸಲು ಮುಂದಾಗಿದ್ದ ಬಿಜೆಪಿ ಕೊನೆಗೆ ತಾನೇ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಕಾಂಗ್ರೆಸ್ ನಾಯಕರು ಈವರೆಗೂ ಭಾವನಾತ್ಮಕ ವಿಷಯಗಳು ಬಂದಾಗ ಹಿಂಜರಿಕೆಯಿಂದಲೇ ಪ್ರತಿಕ್ರಿಯಿಸುತ್ತಿ ದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾದ ಬೆಂಬಲದಿಂದ ಉತ್ತೇಜನಗೊಂಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಪ್ರತಿ ವಾಗ್ದಾಳಿಗೆ ಮುಂದಾಗಿದೆ. ಮಾಂಸಹಾರಿಗಳು ಬಹುಸಂಖ್ಯಾತ ರಾಗಿದ್ದು, ಬಿಜೆಪಿಗೆ ತಾಕತ್ತಿದ್ದರೆ ಮಾಂಸಹಾರಿಗಳ ಮತ ಬೇಡ ಎಂದು ಹೇಳಲಿ ಎಂಬ ತಿರುಗೇಟು ನೀಡಿದೆ. ವಿವಾದ ಗಂಭೀರ ಸ್ವರೂಪಕ್ಕೆ […]
ಮಾಂಸ ತಿಂದು ದೇವಸ್ಥಾನಕ್ಕೆ ಬಂದ ಸಿದ್ದರಾಮಯ್ಯ, ಮತ್ತೊಂದು ವಿವಾದ
ಬೆಂಗಳೂರು,ಆ.21- ಮಾಂಸಹಾರ ಸೇವಿಸಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಮತ್ತೊಂದು ವಿವಾದ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮಡಿಕೇರಿಗೆ ನೆರೆ ಸಂಕಷ್ಟಗಳನ್ನು ವೀಕ್ಷಿಸಲು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಆ ವೇಳೆ ವಿಧಾನಪರಿಷತ್‍ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಮನೆಯಲ್ಲಿ ಸಿದ್ದರಾಮಯ್ಯ ಮತ್ತು ಇತರ ಮುಖಂಡರು ಊಟ ಮಾಡಿದ್ದರು. ಸಂಜೆ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮಾಂಸಾಹಾರ ಊಟ ಮಾಡಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ತೀವ್ರ ಚರ್ಚೆಗೂ ಗ್ರಾಸವಾಗಿದೆ. […]