ಪೀಣ್ಯ-ನಂದಿನಿ ಬಡಾವಣೆ ಸಂಪರ್ಕ ಕೆಳಸೇತುವೆಗೆ ಗ್ರಹಣ : ಬಿಡಿಎ ಮೊಂಡುತನಕ್ಕೆ ಜನ ಹೈರಾಣ

ನಿನ್ನೆ ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಿದೆ. ಆದರೆ, ಹೊರ ವರ್ತುಲ ರಸ್ತೆಗೆ ಅಡ್ಡಲಾಗಿ ಕಂಠೀರವ ಸ್ಟುಡಿಯೋ ಬಳಿ ನಂದಿನಿ ಬಡಾವಣೆಯಿಂದ ಪೀಣ್ಯಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿರುವ ಗ್ರಹಣ 10 ವರ್ಷವಾದರೂ ಬಿಟ್ಟಿಲ್ಲ. ಮುಂದೆ ಬಿಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಂಠೀರವ ಸ್ಟುಡಿಯೋ ಮುಂಭಾಗದ ಮೇಲ್ಸೇತುವೆ ಕೆಳಭಾಗದಿಂದ ನಂದಿನಿ ಬಡಾವಣೆಯಿಂದ ಪೀಣ್ಯ ಕಡೆ ಸಾಗುವ ವಾಹನಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕಳೆದ 2012ರಲ್ಲಿ ಆರಂಭಿಸಿದ್ದ ಕಾಮಗಾರಿಗೆ ಇನ್ನು ಮುಕ್ತಿ ದೊರೆತಿಲ್ಲ. ಕಾಮಗಾರಿ ಸ್ಥಗಿತಕ್ಕೆ ಬಿಡಿಎ ಅಧಿಕಾರಿಗಳ […]

ಪೀಣ್ಯ ಎಲಿವೇಟೆಡ್ ಕಾಮಗಾರಿ 3 ತಿಂಗಳಲ್ಲಿ ಪೂರ್ಣ

ಬೆಂಗಳೂರು,ಸೆ.20- ಬೆಂಗಳೂರು-ಮುಂಬೈ ಸಂಪರ್ಕಿಸುವ ಪೀಣ್ಯ ಎಲಿವೆಟೆಡ್ ಕಾಮಾಗಾರಿ ಡಿಸೆಂಬರ್ ತಿಂಗಳಿಗೆ ಪೂರ್ಣಗೊಳ್ಳಲಿದ್ದು ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಳೆದ ವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಬಂದಾಗ ನಾನು ಈ ವಿಷಯವನ್ನು ಪ್ರಸ್ತಾಪಿಸಿ ತುರ್ತಾಗಿ ಈ ಕಾಮಗಾರಿಯನ್ನು ಮುಗಿಸಿಕೊಡಲು ಮನವಿ ಮಾಡಿದ್ದೆ. ಫ್ಲೈಓವರ್ ಮೇಲೆ ನಡೆಸಲು ಉದ್ದೇಶಿಸಿರುವ ಕಾಮಗಾರಿಗಳ ಪ್ರಸ್ತಾವನೆಯನ್ನು ಸಿದ್ದಪಡಿಸಿ ನಮ್ಮ ಇಲಾಖೆಗೆ ಸಲ್ಲಿಸಿದರೆ ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ಅಧಿಕಾರಿಗಳು ಪತ್ರ […]