ಬೆಲ್ಟ್ ಹಾಗೂ ದೊಣ್ಣೆಯಿಂದ ವಸತಿ ಶಾಲೆಯ ಮಕ್ಕಳ ಮೇಲೆ ಹಲ್ಲೆ

ತುಮಕೂರು, ನ. 25- ವಸತಿ ಶಾಲೆಯ ಮಕ್ಕಳ ಮೇಲೆ ಶಾಲೆಯ ಕಾರ್ಯದರ್ಶಿಯ ಮಗ ಹಲ್ಲೇ ನಡೆಸಿರುವ ಆರೋಪ ಕೇಳಿ ಬಂದಿದೆ. ಮಲ್ಲಸಂದ್ರದ ವಿಶ್ವಭಾರತಿ ಶಾಲೆಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಶಾಲೆಯ ಕಾರ್ಯದರ್ಶಿ ಎನ್.ಮೂರ್ತಿ ಅವರ ಪುತ್ರ ಭರತ್ ಈ ಕೃತ್ಯವೆಸಗಿದ್ದು, ಕುಡಿದ ಅಮಲಿನಲ್ಲಿ ವಸತಿ ಶಾಲೆಯ 42 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ ಹಾಗೂ ದೊಣ್ಣೆಯಿಂದ ಮನಬಂದಂತೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಶಾಲಾ ಕಾರ್ಯದರ್ಶಿಯ ಮಗನ ದರ್ಪದಿಂದ 42 ಮಕ್ಕಳ ಪೈಕಿ ಒಂದು […]