ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಬಂಧನ

ಬೆಂಗಳೂರು,ಫೆ.4- ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ, ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಬಂಧಿಸಿರುವ ಕಲಾಸಿಪಾಳ್ಯಠಾಣೆ ಪೊಲೀಸರು 45000 ರೂ. ನಗದು ಸೇರಿದಂತೆ ಒಟ್ಟು 7.20ಲಕ್ಷ ರೂ. ಮೌಲ್ಯದ 4 ದ್ವಿ ಚಕ್ರ ವಾಹನಗಳು, 25 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಟನ್ಪೇಟೆ ಸಿದ್ದಾರ್ಥ ನಗರದ ನಿವಾಸಿಗಳಾದ ಮೊಹಮ್ಮದ್ ಯುನೂಸ್ ಅಲಿಯಾಸ್ ಯುನೂಸ್ (35) ಮತ್ತು ಮೊಹ್ಮದ್ ಫಯಾಜ್(34)ಬಂಧಿತ ಆರೋಪಿಗಳು. ಗೋಂವಿದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಚಾಕು ತೊರಿಸಿ ಸಾರ್ವಜನಿಕರನ್ನು ಬೆದರಿಸಿ ನಡೆಸಿದ್ದ […]
85 ಲಕ್ಷ ರೂ. ಸುಲಿಗೆ ಮಾಡಿದ್ದ ದರೋಡೆಕೋರರ ಬಂಧನ, 62 ಲಕ್ಷ ವಶ

ಬೆಂಗಳೂರು,ಜ.20- ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಿನ್ನದ ವ್ಯಾಪಾರಿಯ 85 ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 62 ಲಕ್ಷ ನಗದು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಲಾಸಿಪಾಳ್ಯದ ಬಡಾಮಕಾನ್ ಎಚ್.ಸಿದ್ದಯ್ಯರಸ್ತೆ ನಿವಾಸಿ ಮೊಹಮ್ಮದ್ ಜಿಲಾನ್(27), ಶಿವಾಜಿನಗರದ ಅಬ್ದುಲ್ ವಹಾಬ್ ಅಲಿಯಾಸ್ ಕಮರ್(35) ಮತ್ತು ಮಹಾಲಿಂಗೇಶ್ವರ ಬಡಾವಣೆಯ ಪೃಥ್ವಿಕ್(20) ಬಂಧಿತ ಆರೋಪಿಗಳು. ಆರೋಪಿ ಮೊಹಮ್ಮದ್‍ನಿಂದ 31 ಲಕ್ಷ ನಗದು, ಅಬ್ದುಲ್ ವಹಾಬ್‍ನಿಂದ 27 ಲಕ್ಷ ರೂ. ಹಾಗೂ […]
ಸಿಸಿ ಕ್ಯಾಮೆರಾಗಳ ಸುಳಿವಿನಿಂದ ಸಿಕ್ಕಿಬಿದ್ದ ಮೂವರು ಮೊಬೈಲ್ ಸುಲಿಗೆಕೋರರು

ಬೆಂಗಳೂರು, ಜ. 7- ಸುಮಾರು 90 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿ 8.50 ಲಕ್ಷ ರೂ. ಮೌಲ್ಯದ 35 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮಾರಿಮುತ್ತು, ಸೈಯ್ಯದ್ ಸುಹೇಲ್ ಮತ್ತು ಭರತ್ ಬಂಧಿತರು. ಮೊಬೈಲ್ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆ ಕಾರ್ಯ ಮುಂದುವರೆದಿದೆ. ಬಿಳೇಕಹಳ್ಳಿಯ 8ನೇ ಮುಖ್ಯರಸ್ತೆ ನಿವಾಸಿ ಸುಜಿತ್ ಎಂಬುವರು ಡಿ. 28ರಂದು ಬೆಳಗ್ಗೆ ಊರಿನಿಂದ ಬಸ್‍ನಲ್ಲಿ ಬಂದು ಬಿಳೇಕಳ್ಳಿ […]
ಪಟಾಕಿ ಅಂಗಡಿ ಮಾಲೀಕನ ಕಾರು ಅಡ್ಡಗಟ್ಟಿ 20 ಲಕ್ಷ ದರೋಡೆ

ಆನೇಕಲ್, ಅ.24- ಪಟಾಕಿ ಅಂಗಡಿ ಮಾಲೀಕನ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಲಾಂಗ್‍ನಿಂದ ಮಾಲೀಕನ ಮೇಲೆ ಹಲ್ಲೆ ನಡೆಸಿ 20 ಲಕ್ಷ ಹಣ ದೋಚಿ ಪರಾರಿಯಾಗಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕು ಹೊಸೂರು ಮುಖ್ಯ ರಸ್ತೆಯ ಅತ್ತಿಬೆಲೆ ಟೋಲ್ ಸಮೀಪದ ಕಾವೇರಮ್ಮನ ಗುಡಿ ಬಳಿ ಕಳೆದೆರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ತಮಿಳು ನಾಡಿನ ಹೊಸೂರು ರಸ್ತೆ ಸಮೀಪದ ನಿವಾಸಿ ಚಂದ್ರಶೇಖರ್ ರೆಡ್ಡಿ ಎಂಬುವರು ಹೆಬ್ಬಗೋಡಿಯಲ್ಲಿ ಪಟಾಕಿ ಅಂಗಡಿ […]
ಮೂವರು ದರೋಡೆಕೋರರ ಸೆರೆ
ದೇವನಹಳ್ಳಿ, ಜು.15- ಕಾರಿನಲ್ಲಿ ಬಂದು ವ್ಯಕ್ತಿಯ ಕಾಲಿಗೆ ಹೊಡೆದು 10 ಗ್ರಾಂ ಸರ ಕಿತ್ತುಕೊಂಡು ಎಟಿಎಂನಿಂದ 15 ಸಾವಿರ ಹಣ ಡ್ರಾಮಾಡಿಸಿಕೊಂಡು ಪರಾರಿಯಾಗಿದ್ದ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಅನಿಲ್‍ಕುಮಾರ್ ಅಲಿಯಾಸ್ ದೇವು (22), ಸುಬ್ರಹ್ಮಣಿ ಅಲಿಯಾಸ್ ಸುಟ್ಟ (19) ಮತ್ತು ಪವನ್‍ಕುಮಾರ್ (24) ಬಂಧಿತರು. ಆರೋಪಿಗಳಿಂದ 10 ಗ್ರಾಂ ಸರ, ಮಾರುತಿ 800 ಕಾರು ಹಾಗೂ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ.ಜುಲೈ 8ರಂದು ದೇವನಹಳ್ಳಿ ಬೈಪಾಸ್‍ನಲ್ಲಿರುವ ರಿಗಾನ್ ಹೋಟೆಲ್‍ನಲ್ಲಿ ಪಿರ್ಯಾದುದಾರರು […]