ರೌಡಿ ಕಾರಿನ ಮೇಲೆ ಗುಂಡಿನ ಸುರುಮಳೆಗೈದಿದ್ದ ಮೂವರ ಬಂಧನ

ಬೆಂಗಳೂರು, ಡಿ.10- ಆಂಧ್ರಪ್ರದೇಶದ ಮದನ ಪಲ್ಲಿಯ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ಗುಂಡಿ ನ ಸುರಿಮಳೆಗೈದು ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವೈಟ್‍ಫೀಲ್ಡ್ ವಿಭಾಗದ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆಂಧ್ರದ ಪ್ರಕಾಶಂ ಜಿಲ್ಲೆಯ ಮುಂಡ್ಲಮೂರಿನಲ್ಲಿ ಆರೋಪಿಗಳಾದ ಮನೋಜ್‍ಕುಮಾರ್, ಜಯಪ್ರಕಾಶ್ ಹಾಗೂ ಪ್ರವೀಣ್‍ನನ್ನು ಬಂಧಿಸಿದೆ. ಆಂಧ್ರಪ್ರದೇಶದ ತಂಬಲಪಲ್ಲಿಯ ವನಮರೆಡ್ಡಿಗಾರುಪಲ್ಲಿ ಗ್ರಾಮದ ರೌಡಿ ಶಿವಶಂಕರ್ ರೆಡ್ಡಿಯ ತಂದೆ ಜಯಚಂದ್ರರೆಡ್ಡಿ ಕುಟುಂಬದವರಿಗೂ ಇವರ ಮನೆ ಪಕ್ಕದ […]