ವ್ಯಕ್ತಿಯನ್ನು ಮನೆಯಿಂದ ಹೊರಗೆ ಕರೆದು ಗುಂಡಿಕ್ಕಿ ಹತ್ಯೆ

ಜಮ್ಶೆಡ್ಪುರ, (ಜಾರ್ಖಂಡ್) ಮಾ.25-ಮನೆಯಲ್ಲಿದ್ದ ವ್ಯಕ್ತಿಯ ಮೊಬೈಲ್ ಫೋನ್‍ಗೆ ಕರೆ ಮಾಡಿ ಮನೆಯಿಂದ ಹೊರಗೆ ಕರೆದು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಗರದ ದೋಬೋ ಪ್ರದೇಶದಲ್ಲಿ ನಡೆದಿದೆ. ಕಟ್ಟಡ ಕಟ್ಟುವ ಗುತ್ತಿಗೆದಾರ ಸೂರಜ್ ಕಾಳಿಂದಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕುಟುಂಬದೊಂದಿಗೆ ಮನೆಯಲ್ಲಿದ್ದಾಗ ಮೊಬೈಲ್ ಕರೆ ಬಂದಿದೆ ನಂತರ ಮಾತನಾಡುತ್ತಾ ಮನೆಯಿಂದ ಹೊರಗೆ ಬಂದಾಗ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ರಿವಾಲ್ವರ್ ನಿಂದ ಗುಂಡಿಕ್ಕಿ ಕೊಂದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸೂರಜ್ ಅವರನ್ನು ಕೂಡಲೇ ಜೆಮ್ಶೆಡ್ಪುರದ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು […]

ಗುಂಡಿನ ದಾಳಿ : ಬೈಕ್ ಸವಾರರಿಬ್ಬರ ಸಾವು

ಬೆಂಗಳೂರು,ಫೆ.20- ನೆರೆಮನೆಯವರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಇಬ್ಬರು ಯುವಕರಿಗೆ ಆಕಸ್ಮಿಕವಾಗಿ ಗುಂಡುಗಳು ತಗುಲಿ ಮೃತಪಟ್ಟಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಂದು ಬೆಳಗ್ಗೆ ನಡೆದಿದೆ. ಬಾಳೆಹೊನ್ನೂರು ಸಮೀಪದ ಚಂದ್ರುಳ್ಳಿ ಬಿದರೆ ಗ್ರಾಮದ ಪ್ರಕಾಶ್ ಮತ್ತು ಪ್ರವೀಣ್ ಗುಂಡಿಗೆ ಬಲಿಯಾದ ಯುವಕರು. ಇಂದು ಬೆಳಗ್ಗೆ ಪ್ರಕಾಶ್ ಮತ್ತು ಪ್ರವೀಣ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಚಂದ್ರುಳ್ಳಿ ಗ್ರಾಮ ಬಳಿಯ ಉಜ್ಜಯಿನಿ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಜಗಳ ನಡೆಯುತ್ತಿತ್ತು. ರಮೇಶ್ ಎಂಬಾತ ಸಿಂಗಲ್ ಬ್ಯಾರಲ್ ಗನ್‍ನಿಂದ ಮಹಿಳೆಗೆ ಹೊಡೆಯಲು […]

ಜೋಡಿ ಕೊಲೆ ಆರೋಪಿಗಳಿಗೆ ಗುಂಡೇಟು

ದೊಡ್ಡಬಳ್ಳಾಪುರ, ಫೆ.19- ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದಿದ್ದ ಗಲಾಟೆ ಸಂದರ್ಭದಲ್ಲಿ ಇಬ್ಬರು ಯುವಕರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ. ವಿನಯ್ ಮತ್ತು ತ್ರಿಮೂರ್ತಿ (ಅಪ್ಪಾಜಿ) ಬಂತ ಆರೋಪಿ ಗಳಾಗಿದ್ದು, ಇವರಿಬ್ಬ ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫೆ.17ರಂದು ಮಧ್ಯಾಹ್ನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ವೇಳೆ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಆ ಸಂದರ್ಭದಲ್ಲಿ ಒಂದು ಗುಂಪಿನಲ್ಲಿದ್ದವರು ಚಾಕುವಿನಿಂದ ಭರತ್ ಮತ್ತು ಪ್ರತೀಕ್ […]

ಹುಟ್ಟುಹಬ್ಬದ ಪಾರ್ಟಿ ಮೇಲೆ ಗುಂಡಿನ ದಾಳಿ, 8 ಮಂದಿ ಸಾವು

ಜೋಹಾನ್ಸ್‍ಬರ್ಗ್,ಜ.30-ಹುಟ್ಟುಹಬ್ಬದ ಪಾರ್ಟಿ ಮೇಳೆ ಬಂದೂಕುಧಾರಿಗಳ ನಡೆಸಿದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿ, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಪೋರ್ಟ್ ಎಲಿಜಬೆತ್‍ನ ದಕ್ಷಿಣ ಬಂದರು ನಗರವಾದ ಗೆಬರ್ಹಾದಲ್ಲಿ ಭಾನುವಾರ ಸಂಜೆ ಮನೆ ಮಾಲೀಕರು ಹುಟ್ಟು ಹಬ್ಬದ ಸಂಭ್ರದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಎಂಟ್ರಿಯಾದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮನ ಬಂದಂತೆ ಗುಂಡು ಹಾರಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಮನೆ ಮಾಲೀಕರು ಬಲಿಯಾಗಿದ್ದಾರೆ. ಒಟ್ಟು […]

ಕಳ್ಳನ ಮೇಲೆ ಗುಂಡು ಹಾರಿಸಿದ ಮನೆ ಮಾಲೀಕ

ಬೆಂಗಳೂರು, ಡಿ.13- ಮನೆಗಳ್ಳತನ ಮಾಡಲು ಬಂದಿದ್ದ ಕಳ್ಳ ಮನೆ ಮಾಲೀಕ ಬಂದೂಕಿನಿಂದ ಹಾರಿಸಿದ ಗುಂಡಿನಿಂದ ಗಾಯಗೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಆರೋಪಿ ಲಕ್ಷ್ಮಣ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಚೇನಹಳ್ಳಿಯ ನಿವಾಸಿ ವೆಂಕಟೇಶ್ ಎಂಬುವವರ ಮನೆಗೆ ಮುಂಜಾನೆ 2 ಗಂಟೆ ಸುಮಾರಿನಲ್ಲಿಕಳ್ಳತನ ಮಾಡಲು ಆರೋಪಿ ಲಕ್ಷ್ಮಣ ಬಂದಿದ್ದಾನೆ. ಶಬ್ಧದಿಂದ ಎಚ್ಚರಗೊಂಡ ವೆಂಕಟೇಶ್ ಅವರು ಮನೆಗೆ ಕಳ್ಳ ನುಗ್ಗಿದ್ದಾನೆಂದು ತಿಳಿದು, ತಕ್ಷಣ ತಮ್ಮ ಡಬಲ್ ಬ್ಯಾರೆಲ್ ಗನ್ ತೆಗೆದುಕೊಂಡು ಒಂದು ಸುತ್ತು ಗುಂಡು […]

ಗುಂಡಿನ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿಗಳಿಗಾಗಿ ವ್ಯಾಪಕ ಶೋಧ

ಬೆಂಗಳೂರು, ಡಿ.9- ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿರುವ ಆರೋಪಿಗಳಿಗಾಗಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಒಂದು ತಂಡ ಆಂಧ್ರ ಪ್ರದೇಶಕ್ಕೆ, ಮತ್ತೊಂದು ತಂಡ ತಮಿಳುನಾಡಿಗೆ ಹಾಗೂ ಇನ್ನೊಂದು ತಂಡ ತೆಲಂಗಾಣಕ್ಕೆ ಹೋಗಿದ್ದು, ಒಂದು ತಂಡ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದೆ. ಕೆಆರ್‍ಪುರ ಸಮೀಪದ ಕುರುಸೊನ್ನೆನಹಳ್ಳಿ ಬಳಿ ರೌಡಿ ಶಿವಶಂಕರ ರೆಡ್ಡಿ […]

ಮಹಾರಾಷ್ಟ್ರ : ಗುಂಡು ಹಾರಿಸಿ ಗುತ್ತಿಗೆದಾರನ ಕೊಲೆ

ಥಾಣೆ, ಡಿ .8 – ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗುತ್ತಿಗೆದಾರನೊಬ್ಬನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಗಣೇಶ್ ಕೊಕಾಟೆ ಮೃತ ಗುತ್ತಿಗೆದಾರನಾಗಿದ್ದು, ಕಾರ್ಮಿಕ ಗುತ್ತಿಗೆ ನೀಡುವಲ್ಲಿನ ಪೈಪೋಟಿ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ರಾತ್ರಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಥಾಣೆ-ಭಿವಂಡಿ ರಸ್ತೆಯ ಕಶೇಲಿ ಗ್ರಾಮದ ಬಳಿ ಬಂದೂಕಿನಿಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸುದ್ದಿ ತಿಳಿದ ಸ್ಥಳೀಯ ಪೊಲೀಸರು ಮತ್ತು ಅವರ ಸಂಬಂಧಿಕರು ಅವರನ್ನು ಖಾಸಗಿ […]

ರಾಜಸ್ಥಾನ : ನೆರೆಮನೆಗೆ ನುಗ್ಗಿ ಮೂವರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ

ಜೈಪುರ, ನ.27- ಸಣ್ಣ ಮನಸ್ತಾಪ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ನೆರೆಮನೆಗೆ ನುಗ್ಗಿ ಗುಂಡು ಹಾರಿಸಿ ಮೂವರು ಸಹೋದರರನ್ನು ಗುಂಡಿಕ್ಕಿ ಕೊಂದಿರುವ ಘಟನೆ ರಾಜಸ್ಥಾನದ ಭರತ್‍ಪುರ ಜಿಲ್ಲಾಯ ಸಿಕ್ರೋರಾ ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಸಮಂದರ್, ಗಜೇಂದ್ರ ಮತ್ತು ಈಶ್ವರ್ ಎಂದು ಪೊಲೀಸರು ತಿಳಿಸಿದ್ದಾರೆ. ಆ ನೆರೆಮನೆಯ ಆರೋಪಿ ಲಖನ್‍ನನ್ನು ಬಂಧಿಸಲಾಗಿದ್ದು, ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೃತನಲ್ಲಿ ಒಬ್ಬನಾದ ಸಮಂದರ್ ಇತ್ತೀಚೆಗೆ ಲಖನ್ ಮನೆಯಲ್ಲಿ ನಡೆದಿದ್ದ ಜಗಳ ಬಿಡಿಸಲು ಹೋಗಿದ್ದರು ಇದು ವಿವಾದಕ್ಕೆ […]

ಮತ್ತೆ ಸದ್ದು ಮಾಡಿದ ಪೊಲೀಸರ ರಿವಾಲ್ವರ್ : ರೌಡಿಗೆ ಗುಂಡೇಟು

ನೆಲಮಂಗಲ, ನ.25- ಪೊಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಕೊಲೆ ಆರೋಪಿಯೂ ಆಗಿರುವ ರೌಡಿ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ.ರಾಜ ರಾಜನ್ ಅಲಿಯಾಸ್ ಸೇಟು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿ ಶೀಟರ್. ಘಟನೆ ವಿವರ: ದಾಸನಪುರ ಹೋಬಳಿ ಮಾಚೋಹಳ್ಳಿಯ ಗೋಡೌನ್ ಒಂದರ ಬಳಿ ನ.14ರಂದು ನಡೆದ ರೌಡಿ ಶೀಟರ್ ನಟರಾಜ ಅಲಿಯಾಸ್ ಮುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್ ಅಲಿಯಾಸ್ ಮುಳ್ಳು, ಕುಮಾರ್ ಸೇರಿದಂತೆ ಮೂವರು […]

ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

ನೆಲಮಂಗಲ, ನ.23- ಸ್ಥಳ ಮೊಹಜರಿಗೆ ಕರೆದೊಯ್ದ ವೇಳೆ ಇಟ್ಟಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಯೋಗಾನಂದ ಅಲಿಯಾಸ್ ನೈಟ್‍ಶಿಫ್ಟ್ ಯೋಗಿ ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರ. ಈತ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯ ಸರಗಳ್ಳತನ ಪ್ರಕರಣವಲ್ಲದೆ ಬೆಂಗಳೂರು ನಗರದ ಬ್ಯಾಟರಾಯನಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪ್ರಕರಣಗಳು,ತುಮಕೂರಿನ ಕೋರಾ, ಅಮೃತೂರು ಠಾಣೆ, ನೆಲಮಂಗಲ ಗ್ರಾಮಾಂತರ, ಶ್ರೀರಂಗಪಟ್ಟಣ, ಹಿರಿಸಾವೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು […]