Monday, May 6, 2024
Homeಅಂತಾರಾಷ್ಟ್ರೀಯಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ..

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ..

ವಾಷಿಂಗ್ಟನ್, ನ.24- ಅಮೆರಿಕದಲ್ಲಿ ಮತ್ತೆ ಭಾರತದ ವಿದ್ಯಾರ್ಥಿಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಇದೊಂದು ದುರಂತ, ಆಕಸ್ಮಿಕ, ಆಘಾತಕಾರಿ ಘಟನೆ ಎಂದು ಮೆಡಿಕಲ್ ಯೂನಿವರ್ಸಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಹಿಯೋ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದ ದೆಹಲಿ ಮೂಲದ ಆದಿತ್ಯ ಅದ್ಲಾಖ ಅವರು ಕಾರಿನಲ್ಲಿ ಚಲಿಸುವಾಗಲೇ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಲಾಗಿದೆ.
ಆದಿತ್ಯ ಅದ್ಲಾಖಾ (26 ಸಿನ್ಸಿನಾಟಿ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದರು ಎಂದು ವರದಿ ಮಾಡಿದೆ.

;ನ.9ರಂದೇ ಆದಿತ್ಯ ಅದ್ಲಾಖ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇವರು ಎರಡು ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಪ್ರಕರಣವು ತಡವಾಗಿ ಸುದ್ದಿಯಾಗಿದೆ.

ಗೋಡೆಗೆ ಡಿಕ್ಕಿ ಹೊಡೆದ ಕಾರಿನೊಳಗೆ ಆದಿತ್ಯ ಪತ್ತೆಯಾಗಿದ್ದ ಎಂದು ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್ ಜೋನಾಥನ್ ಕನ್ನಿಂಗ್ ಹ್ಯಾಮ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿರುವುದು ಕಂಡುಬಂದಿತ್ತು.

ಹಿಂದೂ ಧರ್ಮದ ಜಾಗೃತಿಗಾಗಿ ಮಿಲಿಯನ್ ಡಾಲರ್ ಖರ್ಚು ಮಾಡುತ್ತಿರುವ NRI ವೈದ್ಯ

ಗುಂಡಿನ ದಾಳಿಗೆ ಒಳಗಾಗಿರುವ ಕಾರೊಂದು ಪತ್ತೆಯಾಗಿದ್ದು, ಅದರೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವಾಹನದ ಚಾಲಕರೊಬ್ಬರು 9111ಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ. ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆದಿತ್ಯ ಉಸಿರಾಡುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಎರಡು ದಿನಗಳ ಬಳಿಕ ಆದಿತ್ಯ ಕೊನೆಯುಸಿರೆಳೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದು ಬೆಳಗ್ಗೆ 6.20ರ ಸುಮಾರಿಗೆ ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಕಾರಿನಲ್ಲಿ ಚಲಿಸುತ್ತಿದ್ದರು. ಇದೇ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕಾರು ಗೋಡೆಗೆ ಗುದ್ದಿದ್ದು, ಆದಿತ್ಯ ಅದ್ಲಾಖ ಅವರಿಗೆ ಗುಂಡು ತಗುಲಿವೆ ಎಂದು ತಿಳಿದುಬಂದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಆದಿತ್ಯ ಅದ್ಲಾಖಾ ಅವರನ್ನು ಯುಸಿ ಮೆಡಿಕಲ್ ಸೆಂಟರ್‍ಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಎರಡು ದಿನಗಳ ನಂತರ ಆದಿತ್ಯ ಮೃತಪಟ್ಟಿದ್ದಾನೆ.

ಶಿವಕುಮಾರ್ ತಪಿತಸ್ಥ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ : ಸಿ.ಟಿ. ರವಿ

ಗುಂಡಿನ ದಾಳಿ ವರದಿಯಾದಾಗಿನಿಂದ ಯಾರನ್ನೂ ಬಂಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಆದಿತ್ಯ ಅದ್ಲಾಖಾ ತನ್ನ ವೈದ್ಯಕೀಯ ಶಿಕ್ಷಣಕ್ಕಾಗಿ ಉತ್ತರ ಭಾರತದಿಂದ ಅಮೆರಿಕದ ಸಿನ್ಸಿನಾಟಿಗೆ ಹೋಗಿದ್ದರು. ಇದಕ್ಕೂ ಮೊದಲು ನವದೆಹಲಿಯ ರಾಮಜಾಸ್ ಕಾಲೇಜಿನಲ್ಲಿ 2018 ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2020ರಲ್ಲಿ ಆಲ್ ಇಂಡಿಯಾ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈಸ್ಸ್‍ನಲ್ಲಿ ಶರೀರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು.

RELATED ARTICLES

Latest News