ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಬಂಧನ

ಸಿಡ್ನಿ, ನ.6- ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗಾಗಿ ರಾಷ್ಟ್ರೀಯ ತಂಡದಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪೊಲೀಸರು ಬಂಧಿಸಲಾಗಿದೆ. ಕಳೆದ ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು ಪ್ರಕರಣದಾಖಲಾಗಿ ತನಿಖೆಯ ನಂತರ 31 ವರ್ಷದ ಗುಣತಿಲಕ ಅವರನ್ನು ಇಂದು ಮುಂಜಾನೆ ಸಿಡ್ನಿ ಸಿಟಿ ಪೊಲೀಸ್‍ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಇಂಗ್ಲೆಂಡ್ ವಿರುದ್ದ ಶ್ರೀಲಂಕಾ ಸೋಲು ಕಂಡು ಪಂದ್ಯಾವಳಿಯಿಂದ ಹೊರಗೆ ಬಿದ್ದ […]

ಶ್ರೀಲಂಕಾದ ಕರುಣ ತಿಲಕರಿಗೆ ಬೂಕರ್ ಪ್ರಶಸ್ತಿ

ಲಂಡನ್.ಅ.18- ಶ್ರೀಲಂಕಾದ ಲೇಖಕ ಶೆಹನ್ ಕರುಣ ತಿಲಕ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಂದಿದೆ. ಛಾಯಾಗ್ರಾಹಕ ಯುದ್ಧದ ಚಿತ್ರಗಳನ್ನು ತೆಗೆದು ಸಾವನ್ನಪ್ಪಿದ ನಡುವಿನ ಕ ಥೆ ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ ಮೀಡಾ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. 2019ರ ನಂತರ ಇದೇ ಮೊದಲ ಬಾರಿಗೆ ನೇರವಾಗಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರಶಸ್ತಿಯ ಜೊತೆಗೆ 50,000 ಪೌಂಡ್ ಬಹುಮಾನ ಸಿಕ್ಕಿದೆ. 1990ರ ದಶಕದ ಕಥಾ ಹಂದರವನ್ನು ಈ ಕಾದಂಬರಿ ಒಳಗೊಂಡಿದೆ. ಈ ಕಥನದ […]

ಲಂಕಾ ನೌಕಪಡೆಯಿಂದ 6 ಭಾರತೀಯ ಮೀನುಗಾರರ ಬಂಧನ

ಕೊಲಂಬೊ, ಆ.28 (ಪಿಟಿಐ)-ಶ್ರೀಲಂಕಾದ ನೌಕಾಪಡೆಯು ಆರು ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ದೇಶದ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ. ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು ಪ್ರದೇಶವಾದ ತಲೈಮನ್ನಾರ್‍ನಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ತಲೈಮನ್ನಾರ್‍ನಲ್ಲಿ ನೌಕಾಪಡೆಯ ವಶದಲ್ಲಿರುವ ಮೀನುಗಾರರನ್ನು ಮನ್ನಾರ್‍ನಲ್ಲಿರುವ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ. ಕಳೆದ ಆಗಸ್ಟ್ 22 ರಂದು ಅಕ್ರಮ ಮೀನುಗಾರಿಕೆ ಆರೋಪದ ಮೇಲೆ 10 ಭಾರತೀಯ […]

ಶ್ರೀಲಂಕಾದಿಂದ ವಲಸೆ ಬಂದ 8 ಮಂದಿ ರಕ್ಷಣೆ

ಚೆನ್ನೈ,ಆ.22-ರಾಮೇಶ್ವರಂ ಬಳಿಯ ಮಿನಿದ್ವೀಪದಿಂದ ಎರಡು ತಿಂಗಳ ಮಗು ಸೇರಿದಂತೆ ಶ್ರೀಲಂಕಾದಿಂದ ಬಂದ 8 ಮಂದಿ ವಲಸಿಗರನ್ನು ಕೋಸ್ಟ್‍ಗಾರ್ಡ್ ಅಧಿಕಾರಿಗಳು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ಎಂಟು ಜನರು ದ್ವೀಪದಲ್ಲಿ ಸಿಲುಕಿಕೊಂಡಿದ್ದರು ನಂತರ ಅಧಿಕಾರಿಗಳು ಹೋವರ್‍ಕ್ರಾಫ್ಟ್ ಬಳಸಿ ಅವರನ್ನು ರಕ್ಷಿಸಿ ರಾಮೇಶ್ವರಂಗೆ ಕರೆತಂದಿದ್ದಾರೆ. ಆಶ್ರಯ ಬಯಸಿ ಜಾಫ್ನಾದಿಂದ ಬಂದ ಕುಟುಂಬ ಮತ್ತು ಕಿಲಿನೊಚ್ಚಿಯ ಇನ್ನೊಬ್ಬರು ಸೇರಿದಂತೆ 8 ಮಂದಿ ನಿನ್ನೆ ಶ್ರೀಲಂಕಾದಿಂದ ಹೊರಟು ಧನುಷ್ಕೋಡಿ ಬಳಿಯ ಮಿನಿ-ಸ್ಯಾಂಡ್ ದ್ವೀಪ ತಲುಪಿದ್ದಾರೆ. ಇದೀಗ ಸಿಜಿ ಅಧಿಕಾರಿಗಳು ಅವರನ್ನು ರಕ್ಷಿಸಿ. ಅವರನ್ನು ಮೆರೈನ್ […]

ಪದಚ್ಯುತ ಶ್ರೀಲಂಕಾ ಅಧ್ಯಕ್ಷನ ಆಗಮನಕ್ಕೆ ಸಿಂಗಾಪುರದಲ್ಲಿ ವಿರೋಧ

Singapore, Opposition, Sri Lankan, Gotabaya, ಸಿಂಗಾಪುರ, ಜು. 18 – ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಇಲ್ಲಿಗೆ ಆಗಮಿಸುತ್ತಿದ್ದಂತೆ ಸಿಂಗಾಪುರದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮೌನ ಪ್ರತಿಭಟನೆಗಳನ್ನು ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಾರ್ವಜನಿಕರು, ಸಿಂಗಾಪುರದವರು, ನಿವಾಸಿಗಳು, ಕೆಲಸದ ಪಾಸ್ ಹೊಂದಿರುವವರು ಮತ್ತು ಸಾಮಾಜಿಕ ಸಂದರ್ಶಕರು ನಮ್ಮ ಸ್ಥಳೀಯ ಕಾನೂನುಗಳಿಗೆ ಬದ್ಧರಾಗಿರಬೇಕೆಂದು ಪೊಲೀಸರು ಕೇಳಿಕೊಳ್ಳುತ್ತಾರೆ. ಯಾರಾದರೂ ಕಾನೂನುಬಾಹಿರವಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ರಾಜಪಕ್ಸೆ ಅವರು ಸಿಂಗಾಪುರಕ್ಕೆ […]